ಕಿಟ್ಟಾದಲ್ಲಿ ನಿವೇಶನ ಕಲ್ಪಿಸಲು ಒತ್ತಾಯ

 ಬಸವಕಲ್ಯಾಣತಾಲೂಕಿನ ಕಿಟ್ಟಾ ಗ್ರಾಮದ ಬಡ ಕುಟುಂಬಗಳಿಗೆ ನಿವೇಶನ ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಎಸ್​ಪಿ ಪದಾಧಿಕಾರಿಗಳ ನಿಯೋಗದಿಂದ ಸೋಮವಾರ ಉಪ ತಹಸೀಲ್ದಾರ್​ ಮಿಲನ್​ಕುಮಾರಗೆ  ಮನವಿಪತ್ರ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಶಂಕರ ಫುಲೆ, ಉಪಾಧ್ಯಕ್ಷ ರಮೇಶ ರಾಠೋಡ್​, ದತ್ತು ಸುಠಾಣೆ, ಮಕ್ಬುಲಸಾಬ್​, ಸಚಿನ ಕಾಂಬಳೆ, ರವಿ ಉದಾತೆ, ಮಹಾದೇವ ಗಾಯಕವಾಡ, ಮಸ್ತಾನಸಾಬ್​, ರಾಹುಲ ವಾಗಮಾರೆ ಇತರರಿದ್ದರು.

Published on: 

ಬಸವಕಲ್ಯಾಣ: ತಾಲೂಕಿನ ಕಿಟ್ಟಾ ಗ್ರಾಮದ ಸರ್ವೆ ನಂ.249ರಲ್ಲಿ ಸುಮಾರು 20 ಬಡ ಕುಟುಂಬಗಳಿಗೆ ನಿವೇಶನಕ್ಕಾಗಿ ಹಕ್ಕು ಪತ್ರ ನೀಡಲಾಗಿದ್ದು, ಹಲವು ವರ್ಷಗಳು ಕಳೆದರೂ ನಿವೇಶನ ನೀಡಿಲ್ಲ. ಬಡ ಕುಟುಂಬಗಳಿಗೆ ನಿವೇಶನ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಮಾಜ ಪಕ್ಷದ ತಾಲೂಕು ಘಟಕ(ಬಿಎಸ್​ಪಿ) ಒತ್ತಾಯಿಸಿದೆ.

ಪಕ್ಷದ ತಾಲೂಕು ಅಧ್ಯಕ್ಷ ಶಂಕರ ಫುಲೆ ನೇತೃತ್ವದಲ್ಲಿ ಪಕ್ಷದ ಪದಾಧಿಕಾರಿಗಳ ನಿಯೋಗ ಸೋಮವಾರ ಬೇಡಿಕೆ ಕುರಿತು ಉಪ ತಹಸೀಲ್ದಾರ್​ ಮಿಲನ್​ಕುಮಾರಗೆ ಮನವಿ ಸಲ್ಲಿಸಿ, ಫಲಾನುಭವಿಗಳು ಹಕ್ಕುಪತ್ರಗಳನ್ನು ಪಡೆದು ಹಲವು ವರ್ಷಗಳು ಕಳೆದಿದ್ದರೂ, ನಿವೇಶನದ ಹಕ್ಕು ಹಾಗೂ ಅಗತ್ಯ ಸೌಲಭ್ಯಗಳ ಕುರಿತು ಸಮಸ್ಯೆಗಳು ಮುಂದುವರಿದಿವೆ ಎಂದು ದೂರಿದರು.

ಸಂಬಂಧಪಟ್ಟ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಕಾನೂನು ಬದ್ಧವಾಗಿ ದೊರೆಯಬೇಕಾದ ಹಕ್ಕು ಮತ್ತು ನ್ಯಾಯವನ್ನು ಒದಗಿಸಬೇಕು. ಅಗತ್ಯ ಕ್ರಮ ಕೈಗೊಳ್ಳದಿದ್ದರೆ ತಹಸಿಲ್​ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಿಎಸ್​ಪಿ ತಾಲೂಕ ಸಂಯೋಜಕ ದತ್ತು ಸುಠಾಣೆ, ಮಕ್ಬುಲಸಾಬ, ಉಪಾಧ್ಯಕ್ಷ ರಮೇಶ ರಾಠೋಡ್​, ಸಚಿನ ಕಾಂಬಳೆ, ಪ್ರಧಾನ ಕಾರ್ಯದರ್ಶಿ ರವಿ ಉದಾತೆ, ಕಾರ್ಯದರ್ಶಿ ಮಹಾದೇವ ಗಾಯಕವಾಡ, ನಗರ ಘಟಕ ಸಂಯೋಜಕ ಮಸ್ತಾನಸಾಬ್​, ಚಿಟ್ಟಾ ಗ್ರಾಮ ಘಟಕ ಅಧ್ಯಕ್ಷ ರಾಹುಲ ವಾಗಮಾರೆ, ಪ್ರಮುಖರಾದ ಪ್ರಶಾಂತ ಗುಡ್ಡೆ, ಮಾರುತಿ ಮೇಕಲೆ, ಜ್ಞಾನೇಶ್ವರ ಖಲ್ಲಾಳೆ ವಕೀಲರು, ಜಾವೀದ ಲದ್ದಾಫ್​, ರಮೇಶ ಮಂಠಾಳಕರ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net