ಗ್ರಾಮೀಣ ಜನರಿಗೆ ಸಹಕಾರ ಸಂಘಗಳು ಪೂರಕ

ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶ್ರೀ ಡಾ.ಶಾಂತವೀರ ಶಿವಾಚಾರ್ಯರು ಉದ್ಘಾಟಿಸಿದರು.  ಡಿಸಿಸಿ ಬ್ಯಾಂಕ್​ ನಿರ್ದೇಶಕ ಓಂಕಾರ ಪಟ್ನೆ, ಹರಶಾಂತ ಅಳ್ಳೆ, ಗುರಪ್ಪ ಹಲಿಂಗೆ, ಕಿರಣಕುಮಾರ ಕಾಮಶೆಟ್ಟೆ, ಜಗನ್ನಾಥ ಗದಲೆಗಾಂವ ಇತರರಿದ್ದರು.
ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದ ಭಾನುವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶ್ರೀ ಡಾ.ಶಾಂತವೀರ ಶಿವಾಚಾರ್ಯರು ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್​ ನಿರ್ದೇಶಕ ಓಂಕಾರ ಪಟ್ನೆ, ಹರಶಾಂತ ಅಳ್ಳೆ, ಗುರಪ್ಪ ಹಲಿಂಗೆ, ಕಿರಣಕುಮಾರ ಕಾಮಶೆಟ್ಟೆ, ಜಗನ್ನಾಥ ಗದಲೆಗಾಂವ ಇತರರಿದ್ದರು.
Published on: 

ಹುಲಸೂರು: ಗ್ರಾಮೀಣ ಭಾಗದ ರೈತರಿಗೆ ಹಾಗೂ ಸ್ವ ಸಹಾಯ ಸಂಘದ ಸದಸ್ಯರಿಗೆ ಮತ್ತು ವ್ಯಾಪಾರಸ್ತರಿಗೆ ಸಹಕಾರ ಸಂಘಗಳು ಪೂರಕವಾಗಿವೆ ಎಂದು ಗಡಿಗೌಂಡಗಾವ ಶ್ರೀ ಡಾ. ಶಾಂತವೀರ ಶಿವಾಚಾರ್ಯರು ನುಡಿದರು.

ಗಡಿಗೌಡಗಾಂವ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ರಾಜ್ಯ ಸಹಕಾರಿ ಮಹಾಮಂಡಲ, ಜಿಲ್ಲಾ ಸಹಕಾರಿ ಒಕ್ಕೂಟ, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್​, ಗಡಿ ಗೌಂಡಗಾವ ಪಿಕೆಪಿಎಸ್​ ಮತ್ತು ಸಹಕಾರಿ ಇಲಾಖೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ 73ನೇ ಅಖಿಲ ಭಾರತ ಸಹಕಾರಿ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಪೂಜ್ಯರು, ಯಾವುದೇ ಸಂಘ ಸಂಸ್ಥೆ ಬೆಳೆಯಬೇಕಾದರೆ ಎಲ್ಲರ ಸಹಕಾರ ಅಗತ್ಯವಾಗಿದೆ. ತಾವು ಪಡೆದಿರುವ ಸಾಲ ಸಕಾಲಕ್ಕೆ ಮರುಪಾವತಿ ಮಾಡಿದರೆ ಸಂಘ ಇನ್ನಷ್ಟು ಅಭಿವೃದ್ಧಿ ಸಾಧ್ಯ ಎಂದರು.

ಜಿಲ್ಲೆಯಲ್ಲಿ ನಮ್ಮ ಪಿಕೆಪಿಎಸ್​ ಸಹಕಾರ ಸಂಘ ಅಭಿವೃದ್ಧ್ಧಿಯಲ್ಲಿದ್ದು, ಆಡಳಿತ ಮಂಡಳಿಯ ಸದಸ್ಯರು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ ಸಹಕಾರ ಯೂನಿಯನ್​ ನಿರ್ದೇಶಕ ಹಾಗೂ ಹಿರನಾಗಾಂವ ಪಿಕೆಪಿಎಸ್​ ಸಹಕಾರ ಸಂಘದ ಅಧ್ಯಕ್ಷ ಜಗನಾಥ ಗದಲೆಗಾಂವ ಮಾತನಾಡಿ, ಕಳೆದ ಕೆಲ ವರ್ಷಗಳ ಹಿಂದೆ ಸ್ವ&ಸಹಾಯ ಸಂಘಗಳು ರಚನೆ ಮಾಡುವುದರ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯ ಸಿಕ್ಕಿದೆ. ಮಹಿಳೆಯರು ಸದೃಢರಾಗಿದ್ದು, ಬ್ಯಾಂಕ್​ ವ್ಯವಹಾರ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರ್ಷಾಂತ ಅಳ್ಳೆ, ಜಿಲ್ಲಾ ಸಹಕಾರಿ ಶಿಕ್ಷಕ ಮಾರುತಿ ಅನಿಸಿಕೆ ವ್ಯಕ್ತಪಡಿಸಿದದರು. ಡಿಸಿಸಿ ಬ್ಯಾಂಕ್​ ನಿರ್ದೇಶಕ ಓಂಕಾರ ಪಟ್ನೆ, ಅಭಿಷೇಕ ಶ್ರೀವಾಸ್ತವ್​, ಪಿಕೆಪಿಎಸ್​ ಸಂಘದ ಅಧ್ಯಕ್ಷರಾದ ಭಾಗವತ ಜಾನಬಾ, ಗುರುನಾಥ ಹಿಂಡೋಳೆ, ಸಂಜುಕುಮಾರ ಗದಲೇಗಾಂವ, ಮಹೇಶ ಪಾಟೀಲ, ಎಚ್​.ಆರ್​.ಮಲ್ಲಮ್ಮ ಹಾಗೂ ನಿರ್ದೆಶಕರು ಇದ್ದರು. ವಿಜಯಕುಮಾರ ಬಿರಾದಾರ ಸ್ವಾಗತಿಸಿ ನಿರೂಪಣೆ ಮಾಡಿದರು. ತಾಲೂಕಿನ ವಿವಿಧ ಪಿಕೆಪಿಎಸ್​ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳನ್ನು ಸನ್ಮಾನಿಸಲಾಯಿತು.