ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಬಿಜೆಪಿ

ಹುಮನಾಬಾದ್​ನಲ್ಲಿ ರಾಹುಲ್​ ಗಾಂಧಿ ಬಂಧನ ಖಂಡಿಸಿ ಹಾಗೂ ಜ್ಞಾನೇಶಕುಮಾರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್​ ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. ಅಭಿಷೇಕ ಪಾಟೀಲ್​, ಅಫ್ಸರ್​ಮಿಯಾ, ಓಂಕಾರ ತುಂಬಾ, ಸುಮಿತ್ರಾ ಪರೀಟ್​, ಮಲ್ಲಿಕಾರ್ಜುನ್​ ಮಾಳಶಟ್ಟಿ ಇತರರಿದ್ದರು.

Published on: 

ಹುಮನಾಬಾದ್​: ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಬಂಧನ ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್​ ಕಾರ್ಯಕರ್ತರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಡಾ.ಬಿ.ಆರ್​.ಅಂಬೇಡ್ಕರ್​ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಡಿಸಿಸಿ ಬ್ಯಾಂಕ್​ ಉಪಾಧ್ಯಕ್ಷ ಅಭಿಷೇಕ ಪಾಟೀಲ್​ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರದಿಂದ ಚುನಾವಣಾ ಆಯೋಗ ಬಳಸಿಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿದೆ.ನಮ್ಮ ಬೇಡಿಕೆ ಈಡೇರಿಕರಗೆ ವಿಳಂಬ ನೀತಿ ಅನುಸರಿಸಿದರೆ ದೇಶಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬ್ಲಾಕ್​ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಅಫ್ಸರ್​ ಮಿಯಾ, ಗ್ರಾಮೀಣ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಓಂಕಾರ ತುಂಬಾ, ಒಬಿಸಿ ಮಹಿಳಾ ಘಟಕ ಅಧ್ಯಕ್ಷೆ ಸುಮಿತ್ರಾ ಪರೀಟ್​, ಪ್ರಮುಖರಾದ ಮಲ್ಲಿಕಾರ್ಜುನ್​ ಮಾಳಶಟ್ಟಿ, ಕಂಟೆಪ್ಪ ದಾನಾ, ಗಣೇಶ ಪಾಟೀಲ್​, ಮಹೇಶ ಅಗಡಿ, ಉದಯಕುಮಾರ ವಾರದ, ಶ್ರೀನಾಥ ದೇವಣಿ, ಸುರೇಶ ಘಾಂಗ್ರೆ, ಶಂಕರನಾಗ ಸಾಹುಕಾರ, ಬಸವರಾಜ ಶೇರಿಕಾರ, ಶಿವಾನಂದ ಕಟ್ಟಿಮನಿ, ಸಂತೋಷ ಅತಿವಾಳ, ಸುಧಾಕರ ಸಂಗಮ್​, ರಾಹುಲ್​ ಉದ್ದಾ, ಹಾಜಿ ಪಟೇಲ್​, ಸೈಯದ್​ ಜಾಫರ್​, ಉಮೇಶ ಕಲ್ಲೂರ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net