ಜನಸೇವಾ ಶಾಲೆ ಮಕ್ಕಳು ಕ್ಷೇತ್ರೀಯ ಮಟ್ಟಕ್ಕೆ

ಬೀದರ್‍ನ ಜನಸೇವಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜ್ಞಾನ ವಿಜ್ಞಾನ ಮೇಳದ ಕ್ಷೇತ್ರೀಯ ಮಟ್ಟದ ವೇದ ಗಣಿತ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಬೀದರ್‍ನ ಜನಸೇವಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜ್ಞಾನ ವಿಜ್ಞಾನ ಮೇಳದ ಕ್ಷೇತ್ರೀಯ ಮಟ್ಟದ ವೇದ ಗಣಿತ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
Published on

ಬೀದರ್: ಇಲ್ಲಿಯ ಪ್ರತಾಪನಗರದ ಜನಸೇವಾ ಶಾಲೆಯ ಮಕ್ಕಳು ಜ್ಞಾನ ವಿಜ್ಞಾನ ಮೇಳದ ಕ್ಷೇತ್ರೀಯ ಮಟ್ಟದ ವೇದ ಗಣಿತ ಸ್ಪರ್ಧೆಗೆ
ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ವಿದ್ಯಾಭಾರತಿ ಕರ್ನಾಟಕ ವತಿಯಿಂದ ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ಜ್ಞಾನ ವಿಜ್ಞಾನ ಮೇಳದ ಹಿರಿಯ ಪ್ರಾಥಮಿಕ ಶಾಲೆ ವಿಭಾಗದ ವೇದ ಗಣಿತ ಸ್ಪರ್ಧೆಯಲ್ಲಿ ಆರ್ಯನ್ ರೇವಣಸಿದ್ದಪ್ಪ, ಸಮರ್ಥ್ ವೀರಕುಮಾರ ಹಾಗೂ ಪ್ರತೀಕರಾಜ್ ತಂಡ ಹಾಗೂ ಪ್ರೌಢಶಾಲೆ ವಿಭಾಗದಲ್ಲಿ ಮಹೇಶ್ವರಿ ಮಹಾದೇವ, ನೀತು ಬಸವರಾಜ ಮತ್ತು ಮಹಾಂತಯ್ಯ ಸ್ವಾಮಿ ತಂಡ ಪ್ರಥಮ ಸ್ಥಾನ ಗಳಿಸಿ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿದವು.
ಪತ್ರ ವಾಚನ ಸ್ಪರ್ಧೆಯಲ್ಲಿ ಶಾಲೆಯ ಶಿಕ್ಷಕಿ ನಿರ್ಮಲಾ ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು.
ಸನ್ಮಾನ: ಕ್ಷೇತ್ರೀಯ ಮಟ್ಟದ ವೇದ ಗಣಿತ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಮಂಗಳವಾರ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.
ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸತತ 12 ವರ್ಷಗಳಿಂದ ಹಾಗೂ ಪ್ರೌಢಶಾಲೆ ವಿಭಾಗದ ಮಕ್ಕಳು 10 ವರ್ಷಗಳಿಂದ ವೇದ ಗಣಿತ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುತ್ತ ಬಂದಿದ್ದಾರೆ. ಸಂಸ್ಕಾರಯುತ ಹಾಗೂ ಗುಣಮಟ್ಟದ ಶಿಕ್ಷಣದಿಂದ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ತೋರುತ್ತಿದ್ದಾರೆ ಎಂದು ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಹೇಳಿದರು.
ಕ್ಷೇತ್ರೀಯ ಮಟ್ಟದ ಸ್ಪರ್ಧೆಗಳು ವಿಜಯವಾಡದಲ್ಲಿ ಅಕ್ಟೋಬರ್ 2 ರಿಂದ 4 ರ ವರೆಗೆ ನಡೆಯಲಿದೆ. ಅದರಲ್ಲೂ ಶಾಲೆಯ ಮಕ್ಕಳು ಉತ್ತಮ ಸಾಧನೆ ತೋರುವ ವಿಶ್ವಾಸ ಇದೆ ಎಂದು ಹೇಳಿದರು.
ಯುನಿಯನ್ ಬ್ಯಾಂಕ್ ವ್ಯವಸ್ಥಾಪಕ ವಿನಯ್‍ತೇಜ್, ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ, ಮುಖ್ಯಶಿಕ್ಷಕರಾದ ರಾಹುಲ್ ಮೇಟೆಕರ್, ನೀಲಮ್ಮ ಚಾಮರೆಡ್ಡಿ, ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net