

ಪ್ರದರ್ಶನದಲ್ಲಿ ಇರುವ ರಾಧಾ-ಕೃಷ್ಣ, ಯಶೋದಾ-ಕೃಷ್ಣ, ಶಿವ ತಾಂಡವ, ಮಹಾರಾಷ್ಟ್ರದ ಸಾಂಪ್ರದಾಯಿಕ ಉಡುಗೆ ಕಲಾಕೃತಿಗಳು ನೋಡುಗರ ಚಿತ್ತ ತಮ್ಮತ್ತ ಆಕರ್ಷಿಸಿದವು.
ಪ್ರದರ್ಶನದಲ್ಲಿ ಮೈಸೂರು, ತಂಜಾವುರ, ಮಾಡ್ರನ್ ಆರ್ಟ್, ಲಿಪ್ಟನ್ ಆರ್ಟ್ ಶೈಲಿಯ ಒಟ್ಟು 140 ಕಲಾಕೃತಿಗಳು ಇವೆ ಎಂದು ಚಿತ್ರ ಕಲಾವಿದ ರಾಜಕುಮಾರ ದೀನೆ ತಿಳಿಸಿದರು.
ಪ್ರದರ್ಶನ ಆಗಸ್ಟ್ 31 ರ ವರೆಗೆ ನಡೆಯಲಿದೆ. ಕಲಾ ಪ್ರೇಮಿಗಳು ಪ್ರದರ್ಶನ ವೀಕ್ಷಿಸಬೇಕು ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಸದಸ್ಯ ಭೀಮರಾವ್ ಬಡಿಗೇರ್ ಮಾತನಾಡಿ, ರಾಜಕುಮಾರ ದೀನೆ ಜಿಲ್ಲೆಯ ಉತ್ತಮ ಚಿತ್ರ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ತಮ್ಮ ಕಲ್ಪನೆಗಳಿಗೆ ಚಿತ್ರದ ರೂಪ ನೀಡುವಲ್ಲಿ ನಿಸ್ಸೀಮರಾಗಿದ್ದಾರೆ ಎಂದು ತಿಳಿಸಿದರು.
ಕಲೆ ಹಾಗೂ ಕಲಾವಿದರನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಘೋಡಂಪಳ್ಳಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಕಲಾ ಶಿಕ್ಷಕ ಯೋಗೀಶ್ ಚ. ಮಠದ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವಿಷ್ಣುಕಾಂತ ಠಾಕೂರ್, ಬಿ.ಕೆ.ಎಸ್. ಅಧ್ಯಕ್ಷ ಓಂಪ್ರಕಾಶ್ ಚೊಳಿಕರ್, ಕಾರ್ಯದರ್ಶಿ ಸತ್ಯಪ್ರಕಾಶ್ ಮಹೀಂದ್ರಕರ್, ಚಿತ್ರಕಲಾ ಶಿಕ್ಷಕ ಪ್ರಕಾಶ್ ತಾಂದಳೆ, ನಿವೃತ್ತ ಶಿಕ್ಷಕ ಆನಂದ ದೀನೆ ಇದ್ದರು.