ಶರಣರ ವಾಣಿಯಿಂದ ಜೀವನ ಪರಿವರ್ತನೆ

ಭಾಲ್ಕಿ ತಾಲೂಕಿನ ತರನಳ್ಳಿಯಲ್ಲಿ ಆಯೋಜಿಸಿದ್ದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ಶ್ರೀ ಗುರುಬಸವ ಪಟ್ಟದ್ದೇವರು ಉದ್ಘಾಟಿಸಿದರು. ಬಾಬುರಾವ ಹಾವಶೆಟ್ಟಿ, ಅಮೃತರಾವ ಮಳಚಾಪುರೆ, ಅಣ್ಣರಾವ ಪಾಟೀಲ್, ಶರಣಪ್ಪ ನಾವದಗೆ, ಜಗನ್ನಾಥರಡ್ಡಿ ಇತರರಿದ್ದರು.
ಭಾಲ್ಕಿ ತಾಲೂಕಿನ ತರನಳ್ಳಿಯಲ್ಲಿ ಆಯೋಜಿಸಿದ್ದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ ಕಾರ್ಯಕ್ರಮವನ್ನು ಶ್ರೀ ಗುರುಬಸವ ಪಟ್ಟದ್ದೇವರು ಉದ್ಘಾಟಿಸಿದರು. ಬಾಬುರಾವ ಹಾವಶೆಟ್ಟಿ, ಅಮೃತರಾವ ಮಳಚಾಪುರೆ, ಅಣ್ಣರಾವ ಪಾಟೀಲ್, ಶರಣಪ್ಪ ನಾವದಗೆ, ಜಗನ್ನಾಥರಡ್ಡಿ ಇತರರಿದ್ದರು.
Published on

ಶರಣರ ವಾಣಿ ಆಲಿಸುವುದರಿಂದ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ ತಂದು ಕೊಳ್ಳಲು ಸಾಧ್ಯ ಎಂದು ಹಿರೇಮಠ ಸಂಸ್ಥಾನದ ಪೀಠಾಽಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

ತಾಲೂಕಿನ ತರನಳ್ಳಿ ಗ್ರಾಮದಲ್ಲಿ ಹಿರೇಮಠ ಸಂಸ್ಥಾನದ ಸಹಯೋಗದಲ್ಲಿ ಆಯೋಜಿಸಿದ್ದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮರ, ಶರಣರ ವಾಣಿ ಪ್ರವಚನದ ಮೂಲಕ ಕೇಳುವುದರಿಂದ ಮನಸ್ಸಿನಲ್ಲಿರುವ ಕಲ್ಮಶ, ಸಿಟ್ಟು ಹಾಗೂ ದ್ವೇಷ ದೂರವಾಗಿ ನೆಮ್ಮದಿ ಸಿಗುತ್ತದೆ ಎಂದರು.
ನಾವು ಆಡುವ ಮಾತುಗಳು ಇನ್ನೊಬ್ಬರಿಗೆ ನೋವುಂಟು ಮಾಡಬಾರದು. ಬದಲಿಗೆ ಪ್ರೀತಿಯನ್ನು ಹಂಚಬೇಕು. ಭೌತಿಕ ಸಂಪತ್ತಿಗಿAತ ಅಧ್ಯಾತ್ಮ ಜ್ಞಾನ ಬಹಳ ಮುಖ್ಯ. ಹೀಗಾಗಿ ಪ್ರತಿಯೊಬ್ಬರೂ ಶ್ರಾವಣ ಮಾಸದಲ್ಲಿ ನಡೆಯುವ ಪ್ರವಚನವನ್ನು ಆಲಿಸಿ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾರ್ಥಕ ಪಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಬಾಬುರಾವ ಹಾವಶೆಟ್ಟಿ, ಅಮೃತರಾವ ಮಳಚಾಪುರೆ, ಶಾಮರಾವ ಮಳಚಾಪುರೆ, ನಾಗೇಂದ್ರಪ್ಪ ಬಿರಾದಾರ್, ಬಂಡೆಪ್ಪ ಪಾಟೀಲ್, ಭೀಮರಾವ ಪಾಟೀಲ್, ಅಣ್ಣರಾವ ಪಾಟೀಲ್, ಚೆನ್ನಯ್ಯ ಸ್ವಾಮಿ, ಜ್ಯೋತಿರ್ಲಿಂಗಯ್ಯ ಸ್ವಾಮಿ, ಶರಣಪ್ಪ ನಾವದಗೆ, ಜಗನ್ನಾಥರಡ್ಡಿ, ಹಣಮಂತರಾವ ಪಾಟೀಲ್, ಹುಲೆಪ್ಪ ಮಾನಕಾರ, ಜಾಲೇಂದ್ರ ಭೌರಾ, ಲಕ್ಷ÷್ಮಕಣ ಮೇತ್ರೆ, ಪ್ರಕಾಶ ಚಳಕಾಪುರೆ, ಮದುಕರ ಪಾಟೀಲ್, ಶಿವಾನಂದ ಪಾಟೀಲ್, ಮಲ್ಲಿಕಾರ್ಜುನ ಚಳಕಾಪುರೆ, ಶಿವಕುಮಾರ ಹುಣಜೆ, ರವಿ ವಾಡಿ ಇತರರಿದ್ದರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಜರುಗಿದ ಬಸವ ಆಸ್ತಿ ಕಿರು ನಾಟಕ ಜನರ ಗಮನ ಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net