ಶಿಕ್ಷಣದ ಜತೆಗೆ ಉತ್ತಮ ಜೀವನ ಮೌಲ್ಯರೂಢಿಸಿಕೊಳ್ಳಿ

ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ನಿವೃತ್ತ ಐಎಎಸ್​ ಅಧಿಕಾರಿ ಡಾ.ಬಾಬುರಾವ ಮುಡಬಿ ಉದ್ಘಾಟಿಸಿದರು. ಸಿಪಿಐ ಅಲಿಸಾಬ್​, ಡಾ.ಪ್ರಹ್ಲಾದ ಚೆಂಗಟೆ ಇತರರಿದ್ದರು.
ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ನಿವೃತ್ತ ಐಎಎಸ್​ ಅಧಿಕಾರಿ ಡಾ.ಬಾಬುರಾವ ಮುಡಬಿ ಉದ್ಘಾಟಿಸಿದರು. ಸಿಪಿಐ ಅಲಿಸಾಬ್​, ಡಾ.ಪ್ರಹ್ಲಾದ ಚೆಂಗಟೆ ಇತರರಿದ್ದರು.
Published on: 

ಬಸವಕಲ್ಯಾಣ: ಆರೋಗ್ಯಕರ ಸಮಾಜ ನಿಮಾರ್ಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮುಖ್ಯವಾದ್ದು, ಶಿಕ್ಷಣದ ಜತೆಗೆ ಉತ್ತಮ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ-ವಿಶ್ವಾಸ ಮತ್ತು ಸಹಕಾರದ ಮನೋಭಾವದಿಂದ ಬದುಕಬೇಕು ಎಂದ ನಿವೃತ್ತ ಐಎಎಸ್​ ಅಧಿಕಾರಿ ಡಾ.ಬಾಬುರಾವ ಮುಡಬಿ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ 2026-&27ನೇ ಶೈಕ್ಷಣಿಕ ಸಾಲಿನ ವಿವಿಧ ಸಮಿತಿಗಳ ಕಾರ್ಯ ಚಟುವಟಿಕೆಗಳಿಗೆ ಚಾಲನೆ ಮತ್ತು ಬಿಎ. ಬಿಎಸ್ಸಿ. ಬಿಕಾಂ. ಹಾಗೂ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಯ, ಸೌಲಭ್ಯ ಮತ್ತು ಅವಕಾಶಗಳನ್ನು ಸಮರ್ಪವಾಗಿ ಬಳಸಿಕೊಂಡು ಶ್ರಮ ವಹಿಸಿ ಅಭ್ಯಾಸ ಮಾಡುವ ಮುಲಕ ಮಹತ್ತರ ಸಾಧನೆ ಮಾಡಬೇಕು ಎಂದರು.

ಸಿಪಿಐ ಅಲಿಸಾಬ್​ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ ಮತ್ತು ಶ್ರಮದ ಓದಿನ ಅವಶ್ಯಕತೆ. ಶಿಕ್ಷಣ ಮತ್ತು ಸಾಧನೆಗೆ ಬಡತನ ಅಡ್ಡಿಯಾಗದು. ಯಾವದೆ ಸಾಧನೆ ಮಾಡಬೇಕಾದರೆ ಮನಸ್ಸು, ಪರಿಶ್ರಮ ಅವಶ್ಯವಾಗಿದ್ದು, ವಿದ್ಯಾರ್ಥಿಗಳು ಶ್ರಮ ವಹಿಸಿ ಅಭ್ಯಾಸ ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಹ್ಲಾದ ಚೆಂಗಟೆ, ಬೀದರ್​ ವಿವಿ ಕನ್ನಡ ವಿಭಾಗದ ಡೀನ್​ ಪ್ರೊ.ರುತಾ ಮಾತನಾಡಿದರು. ಡಾ.ಚಂದ್ರಕಾಂತ ಗಾಯಕವಾಡ ಮತ್ತು ಡಾ.ಪ್ರತಿಭಾ ಬಡಿಗೇರ ಇದ್ದರು.ಡಾ.ಶ್ರೀಕಾಂತ ಚವ್ಹಾಣ್​ ಸ್ವಾಗತಿಸಿದರು. ಮೀನಾಕ್ಷಿ ಬಿರಾದಾರ ನಿರೂಪಣೆ ಮಾಡಿದರು. ವಿದ್ಯಾರ್ಥಿಗಳಿಂದ ನಡೆದ ಸಾಂಸತಿಕ ಕಾರ್ಯಕ್ರಮ ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net