ದೇವಸ್ಥಾನದ ಅಗ್ನಿ ಕುಂಡದಲ್ಲಿ ಬುಧವಾರ ಬೆಳಗ್ಗಿನ ಜಾವದಿಂದ ಅಸಂಖ್ಯ ಭಕ್ತರು ಪುಷ್ಕರಣಿಯಲ್ಲಿ ಸ್ನಾನ ಮಾಡಿ ಮಡಿಯಿಂದ ಅಗ್ನಿ ತುಳಿದು ದೇವರ ದರ್ಶನ ಪಡೆದರು. ದೇವಸ್ಥಾನದಿಂದ ಮಂಗಳವಾರ ರಾತ್ರಿ ಆರಂಭಗೊAಡ ಪಲ್ಲಕ್ಕಿ ಉತ್ಸವ ಬುಧವಾರ ಬೆಳಗ್ಗಿನ ಜಾವ ಅಗ್ನಿಕುಂಡ ತಲುಪಿತು. ಮಾರ್ಗದುದ್ದಕ್ಕೂ ಭಜನೆ, ಡೊಳ್ಳು ಕುಣಿತ, ಪುರವಂತರ ಸೇವೆ, ಕಲಾ ತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ ಕಣ್ಮನ ಸೆಳೆಯಿತು.