

ಹುಮನಾಬಾದ್: ಉತ್ತಮ ಚಾರಿತ್ರ ಮತ್ತು ಕೃತಿಗಳೇ ವ್ಯಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದು ಬೀದರ್‌ನ ಚಿದಂಬರಾಶ್ರಮ ಸಿದ್ಧಾರೂಢ ಮಠದ ಪೀಠಾಧಿಪತಿ ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿ ನುಡಿದರು.
ಪಟ್ಟಣದ ಮಾಣಿಕ್ಯ ಸೌಧದಲ್ಲಿ ಭಾನುವಾರ ಗೆಳೆಯರ ಹಾಗೂ ವಿದ್ಯಾರ್ಥಿ ಬಳಗ ಏರ್ಪಡಿಸಿದ್ದ ರಾಷ್ಟçಪಶಸ್ತಿ ಪುರಸ್ಕೃತ ಶಿP್ಷÀಕ, ಸೇವಾ ನಿವೃತ್ತ ಪಂಡಿತ ಬಾಳೂರೆ ಅಭಿನಂದನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಗುರು-ಹಿರಿಯರನ್ನು ಪರಿಗಣನೆಗೆ ತೆಗೆದುಕೊಳ್ಳದ ಇಂದಿನ ಸ್ಥಿತಿಯಲ್ಲಿಯೂ ಉತ್ತಮ ಸೇವೆ ಸಲ್ಲಿಸಿದ ಪಂಡಿತ ಬಾಳೂರೆ ತಮ್ಮ ಸೇವಾ ನಿವೃತ್ತಿ ಸಮಾರಂಭದಲ್ಲಿ ತಾಯಿ ತುಲಾಭಾರ ನೆರವೇರಿಸಿರುವುದು ಮಾದರಿಯಾಗಿದೆ ಎಂದು ಕೊಂಡಾಡಿದರು.
ಮೈಸೂರಿನ ಆಧ್ಯಾತ್ಮ ಚಿಂತಕ ಶಂಕರ ದೇವನೂರ ಮಾತನಾಡಿ, ಗ್ರಾಮೀಣ ಭಾಗದಲ್ಲಿ 37 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಬಾಳೂರೆ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ e್ಞÁನ ಜ್ಯೋತಿ ಬೆಳಗಿಸಿದ್ದು, ಇಂದು ಆ ಜ್ಯೋತಿಗಳು ಸಮಾಜಕ್ಕೆ ದಿವ್ಯ ಜ್ಯೋತಿಯಾಗಿ ಬೆಳಗುತ್ತಿವೆ ಎಂದರು.
ವಿಶ್ರಾAತ ಅಪರ ಜಿ¯್ಲÁಧಿಕಾರಿ ಮಲ್ಲಿಕಾರ್ಜುನ ಮಠ ಮಾತನಾಡಿ, ಬಾಳೂರೆ ಜೀವನ ಸಾಧನೆ ಕುರಿತ ಕಲ್ಯಾಣ ಸಿರಿ ಅಭಿನಂದನಾ ಗ್ರಂಥ ಬಿಡುಗಡೆ ಭಾಗ್ಯ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯP್ಷÀ ಬಸವಕುಮಾರ ಪಾಟೀಲï ಪ್ರಾಸ್ತಾವಿಕ ಮಾತನಾಡಿದರು. ಮಹಾದೇವಪ್ಪ ಉಪ್ಪಿನ್ ಗ್ರಂಥಾವಲೋಕನ ಮಾಡಿದರು.
ಪ್ರಮುಖರಾದ ಗಿರೀಶ ಕಡ್ಲೇವಾಡ, ಡಾ.ಪ್ರಕಾಶ ಪಾಟೀಲï, ನಾಗೇಂದ್ರ ಬಾಳೂರೆ, ಭೀಮರಾವ ಪಾಟೀಲï ಬಿಜಲಗಾಂವ, ಮಹಾದೇವಿ ಬಾಳೂರೆ, ಪಾರ್ವತಿ ಬಾಳೂರೆ, ವೆಂಕಟರೆಡ್ಡಿ ಕೊಪಗೀರ, ಭಾವುರಾವ ಪಾಟೀಲï, ನಾರಾಯಣ ಗಣೇಶ, ಕಿಶನ್ ನಾಯಕ, ಕಾಂತವೀರ ಬಾಳೂರೆ, ಶಂಕರ ಬಾಳೂರೆ, ಮನೋಹರರಾವ ದಾಡಗೆ, ರವೀಂದ್ರರೆಡ್ಡಿ, ಬನ್ಸಿಧರ ಪಾಟೀಲ್ ಇತರರಿದ್ದರು.
ಶರದ ನಾರಾಯಣಪೇಟಕರ್ ಸ್ವಾಗತಿಸಿದರು. ಕರುಣ ಸಲಗರ ವಂದಿಸಿದರು. ಪಂಡಿತ ಬಾಳೂರೆ ದಂಪತಿಗೆ ಹೃದಯಸ್ಪರ್ಶಿ ಸನ್ಮಾನ ನೀಡಲಾಯಿತು.