ಡೆತ್ ನೋಟ್ ಬರೆದಿಟ್ಟು ಬಾವಿಗೆ ಹಾರಿ ಪ್ರಾಧ್ಯಾಪಕಿ ಆತ್ಮಹತ್ಯೆ; ಮಹಿಳಾ ದಿನಾಚರಣೆಯಂದೇ ಮಾಡಿದ ಈ ನಿರ್ಧಾರಕ್ಕೆ ಕಾರಣವೇನು?

BHALIK
Published on

ಬೀದರ: "ನನ್ನ ಸಾವಿಗೆ ಯಾರು ಕಾರಣರಲ್ಲ, ನಾನು ಝರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ" ಎಂದು ಮಹಿಳಾ ದಿನಾಚರಣೆಯಂದೇ ಡೆತ್ ನೋಟ್ ಬರೆದಿಟ್ಟ ಪ್ರಾಧ್ಯಾಪಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೀದರನ ಭಾಲ್ಕಿ ಪಟ್ಟಣದ ಕೋಟೆ ಆವರಣದಲ್ಲಿರುವ ಝರಬಾವಿಗೆ ಪ್ರಾಧ್ಯಾಪಕಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೂಜಾ ಸಂಗಪ್ಪ ಹುಲಸೂರೆ (26) ಆತ್ಮಹತ್ಯೆ ಮಾಡಿಕೊಂಡ ಪ್ರಾಧ್ಯಾಪಕಿ.

ಭಾಲ್ಕಿ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪೂಜಾ ಏಕಾಏಕೀ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾನುವಾರ ನಸುಕಿನ ಜಾವ ಮನೆಯಿಂದ ಹೋದ ಪೂಜಾ ಬಾವಿಗೆ ಹಾರಿ‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೂಜಾ ಕುಟುಂಬಸ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net