ಬಿಡನಾಳ ಹನುಮಂತ ದೇವರ ಜಾತ್ರೆ

IMG-20250405-WA0014.jpg
Published on

ಹುಬ್ಬಳ್ಳಿ: ಇಲ್ಲಿನ ಬಿಡನಾಳದ ಶ್ರೀ ಹನುಮಂತ ದೇವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ ಏ. 7ರಿಂದ 11ರ ವರೆಗೆ ಹನುಮಂತ ದೇವರ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಏ. 7ರಿಂದ ನಿತ್ಯ ಸಂಜೆ 7ಕ್ಕೆ ಶ್ರೀ ಮರಗಮ್ಮ ದೇವಸ್ಥಾನದ ಹತ್ತಿರ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಹುಬ್ಬಳ್ಳಿ ಶಾಂತಾಶ್ರಮದ ಶ್ರೀ ಅಭಿನವ ಸಿದ್ದಾರೂಢ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ.

ಹಾವೇರಿ ಹುಕ್ಕೇರಿಮಠ ಶ್ರೀ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. 8ರಂದು ಗ್ರಾಮ ದೇವತೆ ಪೂಜಾ ಕಾರ್ಯಕ್ರಮ, 10ರಂದು ಬೆಳಗ್ಗೆ 7.30ಕ್ಕೆ ಹನುಮಂತ ದೇವರ ಬೆಳ್ಳಿ ಕವಚ ಮತ್ತು ತೇರಿನ ಕಳಸದ ಮೆರವಣಿಗೆ ನಡೆಯಲಿದೆ.

11ರಂದು ಪ್ರವಚನ ಮಂಗಲೋತ್ಸವ ನಡೆಯಲಿದ್ದು, ಮಣಕವಾಡ ಅನ್ನದಾನೇಶ್ವರ ಮಠದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.

12ರಂದು ಬೆಳಗ್ಗೆ ಹನುಮಂತ ದೇವರಿಗೆ ತೊಟ್ಟಿಲೋತ್ಸವ ನಂತರ ಹೋಮ ಇತರ ಧಾಮಿರ್ಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6ಕ್ಕೆ ಹನುಮಂತ ದೇವರ ರಥೋತ್ಸವ ನಡೆಯಲಿದ್ದು, ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.

13ರಂದು ಬೆಳಗ್ಗೆ 11.15ಕ್ಕೆ ಕಡುಬಿನ ಕಾಳಗ ನಡೆಯಲಿದ್ದು, ಮೂರುಸಾವಿರಮಠದ ಶ್ರೀ ಜಗದ್ಗುರು ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮಹಿಳೆಯರಿಂದ ವಿಶೇಷವಾಗಿ ರಥೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net