

ವಿಜಯಪುರ : ಇಲ್ಲಿನ ಶಾಂತಿನಿಕೇತನ ಅಂತಾರಾಷ್ಟ್ರೀಯ (ಸಿಬಿಎಸ್ಸಿ) ಶಾಲೆ ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ಸಂರಣಾ ದಿನದ ಅಂಗವಾಗಿ ಸೈಕಲ್ ಜಾಗೃತಿ ಜಾಥಾ ನಡೆಯಿತು.
ನಗರದ ಗೋಳಗುಮ್ಮಟ ಆವರಣದ ಬಳಿ ಶನಿವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಸಂಸ್ಥೆಯ ನಿರ್ದೇಶಕ ಭರತ್ ಬಿರಾದಾರ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಜಾಥಾ ಗಾಂಧಿ ವೃತ್ತ, ರಾಮ ಮಂದಿರ ಹಾಗೂ ಬಿಎಲ್ಡಿಇ ರಸ್ತೆ ಮಾರ್ಗವಾಗಿ ಸಂಚರಿಸಿ ಶಾಂತಿನಿಕೇತನ ಶಾಲೆ ತಲುಪಿತು. ಜಾಥಾದಲ್ಲಿ ಮಕ್ಕಳು ಪರಿಸರ ರಕ್ಷಿಸುವ ಕುರಿತು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಶಾಲೆ ಪ್ರಾಚಾರ್ಯ ರಿಜೇಶ್ ಪಿ.ಎನ್., ಶೈಕ್ಷಣಿಕ ಸಂಯೋಜಕಿ ಕಮರ್ ಪಾರಾ ಹಾಗೂ ಕ್ಯಾಂಪಸ್ ಆಡಳಿತಾಧಿಕಾರಿ ಪ್ರಶಾಂತ ಹುರಕಡ್ಲಿ ಮತ್ತಿತರರಿದ್ದರು.