ಬೀಬಿಆಯಿಷಾಗೆ ರಾಜ್ಯ ಮಟ್ಟದ ಪ್ರತಿಭಾ ಪ್ರಶಸ್ತಿ

18 Dwd 8
Published on

ಧಾರವಾಡ: ತಾಲೂಕಿನ ಅಮ್ಮಿನಬಾವಿ ಗ್ರಾಮದ ಸುಶಿಲಾತಾಯಿ ಅಜ್ಜಯ್ಯ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಬೀಬಿಆಯಿಷಾ ಮಕ್ತುಂಹುಸೇನ ಪಠಾಣ್, ಬೆಂಗಳೂರಿನ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ ಕೊಡಮಾಡುವ 2025ನೇ ಸಾಲಿನ ರಾಜ್ಯ ಮಟ್ಟದ ಆದರ್ಶ ವಿದ್ಯಾರ್ಥಿನಿ ಪ್ರತಿಭಾ ಪ್ರಶಸ್ತಿ ಲಭಿಸಿದೆ.

ಇತ್ತೀಚೆಗೆ ರಾಣೆಬೆನ್ನೂರಿನಗ ಮೃತ್ಯುಂಜಯ ಸಭಾಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಗೌರವಾಧ್ಯಕ್ಷ ಹನುಮಂತಪ್ಪ, ರಾಜ್ಯಾಧ್ಯಕ್ಷ ರಾಜಗೋಪಾಲ, ಜಿಲ್ಲಾ ಅಧ್ಯಕ್ಷ ಭೀಮಪ್ಪ ಮಲ್ಲಿಗವಾಡ ಹಾಗೂ ಗ್ರಾಮೀಣ ತಾಲೂಕು ಅಧ್ಯಕ್ಷ ಆಂಜನೇಯ ಎಂ. ಇದ್ದರು.

ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಬೀಬಿಆಯಿಷಾಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಅಭಿನವ ಶಾಂತಲಿ0ಗ ಶಿವಾಚಾರ್ಯ ಸ್ವಾಮೀಜಿ ಶುಭ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net