

ಬೆಳಗಾವಿ: ಮಹಾಕುಂಭಮೇಳದಲ್ಲಿ ಭಾಗವಹಿಸಲು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕೇಂದ್ರ ಸ್ಥಾನದಿಂದ ಖಾಸಗಿ ಟ್ರಾವೆಲ್ಸ್ ಮೂಲಕ80 ಜನ ಭಕ್ತರು ಹೋಗಿದ್ದಾರೆ. ಇವರಲ್ಲಿ 4೦ ಮಹಿಳಾ ಭಕ್ತರು, ಚಿಕ್ಕ ಮಕ್ಕಳು ಇದ್ದಾರೆ. ಗೋಕಾಕ, ಬೆಳಗಾವಿ, ರಾಮದುರ್ಗ, ಸವದತ್ತಿ ಸೇರಿ ವಿವಿಧ ತಾಲೂಕಿನ ಜನರು ಒಟ್ಟಿಗೆ ಹೋಗಿದ್ದಾರೆ. ಪ್ರಯಾಗರಾಜ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕ ವಾಹನಗಳ ಸಂಖ್ಯೆ ಜಾಸ್ತಿ ಇದೆ. ಅಂದಾಜು 500 ಜನ ಕರ್ನಾಟಕದ ಭಕ್ತರು ಹೆದ್ದಾರಿಯಲ್ಲಿ ಇದ್ದಾರೆ ಎಂದು ಬೈಲಹೊಂಗಲ ಖಾಸಗಿ ಏಜೆನ್ಸಿ ಟ್ರಾವೆಲ್ಸ್ ಸಿಬ್ಬಂದಿ ತಿಳಿಸಿದ್ದಾರೆ