ಬಾರಕೂರಿನಲ್ಲಿ ಭೂವರಾಹಶಾಂತಿ ಯಜ್ಞ

bmr
Published on

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ

ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಅಭಿವೃದ್ಧಿಗೆ ಪೂರಕವಾಗುವಂತೆ ದೇವಸ್ಥಾನದ ಬಳಿಯಲ್ಲಿ ಉತ್ತಮ ಜಲಾಶ್ರಯ ಇರುವ ತೆರೆದ ಬಾವಿ ಸಹಿತ 63 ಸೆಂಟ್ಸ್ ಜಾಗವನ್ನು ಖರೀದಿಸಿದ್ದು, ಸೋಮವಾರ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ದೇವಸ್ಥಾನದ ತಂತ್ರಿ ಲಕ್ಷ್ಮೀಕಾಂತ ಶರ್ಮ ನೇತೃತ್ವದಲ್ಲಿ ಭೂವರಾಹಶಾಂತಿ ಯಜ್ಞ ನಡೆಯಿತು.

ಈ ಸಂದರ್ಭದಲ್ಲಿ ಗುರುಗಳ ಪಾದುಕಾಪೂಜೆ ಜರುಗಿತು. ಪುರೋಹಿತ್ ರೋಹಿತಾಶ್ವ ಶರ್ಮ, ಅರ್ಚಕ ಪ್ರಕಾಶ್ ಪುರೋಹಿತ್ ಮತ್ತಿತರರು ಯಜ್ಞ ಕಾರ್ಯಕ್ಕೆ ಸಹಕರಿಸಿದರು. ಜಾಗ ಖರೀದಿಗೆ ಆರ್ಥಿಕ ನೆರವು ನೀಡಿದವರನ್ನು ಗೌರವಿಸಲಾಯಿತು.

ದೇವಸ್ಥಾನದ ಆಡಳಿತ ಧರ್ಮದರ್ಶಿ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ, ಮೊಕ್ತೇಸರರಾದ ಪ್ರವೀಣ ಆಚಾರ್ಯ ರಂಗನಕೆರೆ, ಸುಬ್ರಾಯ ಆಚಾರ್ಯ ಮಣೂರು, ಪ್ರಧಾನ ಕಾರ್ಯದರ್ಶಿ ಚೇಂಪಿ ಜನಾರ್ದನ ಆಚಾರ್ಯ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net