

ಲಕ್ಷ್ಮೇಶ್ವರ: ಪಟ್ಟಣದ ಬಾಲಕ ಭುವನ ಗದ್ದಿ ಯುವ ಕ್ರೀಡಾಸಿರಿ ಪ್ರಶಸ್ತಿಗೆ ಪಾತ್ರನಾಗಿದ್ದು, ಶನಿವಾರ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಿಸನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಶಿ ಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕರಾಟೆ ಪಟು ಬಾಲಕ ಭುವನ್ ಗದ್ದಿ ಅವರಿಗೆ ಯುವ ಕ್ರೀಡಾಸಿರಿ ಪ್ರಶಸ್ತಿ ನೀಡಿ ಗೌರವಿಸಿದರು. ಚಿಕ್ಕ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಟೆಕ್ವಾಂಡೊ (ಕರಾಟೆ) ಕ್ರೀಡಾಪಟುವಾಗಿ ಭುವನ್ ಸಾಧನೆ ಮಾಡಿದ್ದಾರೆ. ಆತನ ಸಾಧನೆಗೆ ತರಬೇತುದಾರ ರವಿ ಮಾಸ್ಟರ ಹರ್ಷ ವ್ಯಕ್ತಪಡಿಸಿದ್ದಾರೆ.