ಡಾ. ಲೀಲಾದೇವಿಗೆ ಭೂಸನೂರಮಠ ಸಾಹಿತ್ಯ ಪ್ರಶಸ್ತಿ; ಉಡುತಡಿ ಅಭಿವೃದ್ಧಿಗೆ ಪ್ರಶಸ್ತಿಯ ಮೊತ್ತ ಸಮರ್ಪಣೆ

9 Dwd 8
Published on

ಧಾರವಾಡ: ಕನ್ನಡದ ಮೊದಲ ವಚನಗಾರ್ತಿ ಅಕ್ಕಮಹಾದೇವಿ ಅವರ ಜನ್ಮಸ್ಥಳ ಉಡುತಡಿಯ ರಕ್ಷಣೆಗೆ ನಾನು 20 ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಇಂದು ನನಗೆ ಬಂದ ಪ್ರಶಸ್ತಿಯ ಮೊತ್ತವನ್ನು ಅಕ್ಕಮಹಾದೇವಿ ಪ್ರತಿಷ್ಠಾನಕ್ಕೆ ಸಲ್ಲಿಸುತ್ತೇನೆ ಎಂದು ಹಿರಿಯ ಸಾಹಿತಿ ಡಾ. ಲೀಲಾದೇವಿ ಆರ್. ಪ್ರಸಾದ ಹೇಳಿದರು.
ನಗರದ ಶ್ರೀ ರಾ.ಹ. ದೇಶಪಾಂಡೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂ.ಶಿ. ಭೂಸನೂರಮಠ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಭೂಸನೂರಮಠರ ಸಾಹಿತ್ಯ ಸಾಧನೆಗಳನ್ನು ನಾನು ಬಾಲ್ಯದಿಂದಲೂ ಗಮನಿಸುತ್ತಾ ಬೆಳದಿದ್ದೇನೆ. ಅವರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ನನಗೆ ದೊರೆತಿರುವುದು ಸಂತಸದ ಸಂಗತಿ. ನಮ್ಮ ನಾಡು, ನುಡಿ, ಭಾಷೆ, ಸಂಸ್ಕೃತಿ, ಸಂಪ್ರದಾಯ ಮತ್ತು ಶಿಲ್ಪಕಲೆಗಳ ಕುರಿತು ಹೆಮ್ಮೆ ಪಡುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಇದೇವೇಳೆ ವಿಶ್ರಾಂತ ಎಸಿಎ್ ಎಂ.ವಿ. ವಡ್ಡೀನ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಡಾ. ಬಸವರಾಜ ಜಗಜಂಪಿ ಅವರು ಭೂಸನೂರಮಠರ ಭವ್ಯಮಾನವ ಮಹಾಕಾವ್ಯದ ಕುರಿತು ಉಪನ್ಯಾಸ ನೀಡಿದರು.
 ಪ್ರಶಸ್ತಿ ಪುರಸ್ಕೃತರ ಕುರಿತು ಡಾ. ಗುರುದೇವಿ ಹುಲ್ಲೆಪ್ಪನವರಮಠ ಅಭಿನಂದನಾ ನುಡಿಗಳನ್ನಾಡಿದರು.
ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ. ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಕುಮಾರ ಹಿರೇಮಠ ಸ್ವಾಗತಿಸಿದರು. ಗಾಯತ್ರಿ ಸರದೇಶಪಾಂಡೆ ಪ್ರಾರ್ಥಿಸಿದರು. ಡಾ. ಈರಣ್ಣ ಇಂಜಗನೇರಿ ನಿರೂಪಿಸಿದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಡಾ. ವೀರಣ್ಣ ರಾಜೂರ, ಡಾ. ಡಿ.ಎಂ. ಹಿರೇಮಠ, ಶಂಕರ ಹಲಗತ್ತಿ, ಡಾ. ರಾಜೇಶ್ವರಿ ಮಹೇಶ್ವರಯ್ಯ, ಪ್ರೊ. ಸುಭಾಸ ಭೂಸನೂರಮಠ, ಶಿವಶಂಕರ ಹಿರೇಮಠ, ಡಾ. ಆರ್.ಬಿ. ಚಿಲುಮಿ, ವಿಶ್ವೇಶ್ವರಿ ಹಿರೇಮಠ, ನಿಂಗಣ್ಣ ಕುಂಟಿ ಹಾಗೂ ಭೂಸನೂರಮಠ ಕುಂಟುಂಬ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net