ಸ್ನೇಹಿತನ ಮೇಲಿನ ದ್ವೇಷಕ್ಕೆ ಮತ್ತೊಬ್ಬನನ್ನು ಬಲಿ ಪಡೆದ ಭೂಪ

Vinayak-Narayan-Bhatta-
Published on

ಹೊನ್ನಾವರ: ಟಿಪ್ಪರ್ ಹಾಯಿಸಿ ಆಟೋ ಚಾಲಕನನ್ನು ಕೊಲೆ ಮಾಡಿದ ಘಟನೆ ತಾಲೂಕಿನ ಅರೆ ಅಂಗಡಿಯಲ್ಲಿ ಬುಧವಾರ ನಡೆದಿದೆ.
ಅರೆ ಅಂಗಡಿ ಗ್ರಾಮದ ಓಲ್ವಿನ್ ರವಿ ಲೋಬೋ ಮೃತಪಟ್ಟವರಾಗಿದ್ದು, ಹಡಿನಬಾಳದ ವಿನಾಯ ನಾರಾಯಣ ಭಟ್ಟ ಕೊಲೆ ಮಾಡಿದ ಆರೋಪಿ.
ಹಣದ ವಿಚಾರದಲ್ಲಿ ತನ್ನದೇ ಗೆಳೆಯ ಸಾಲ್ಕೋಡಿನ ಜನಾರ್ಧನ ಕೇಶವ ನಾಯ್ಕ ಜತೆ ವೈಮನಸ್ಯ ಹೊಂದಿದ್ದ ವಿನಾಯಕ ನಾರಾಯಣ ಭಟ್ಟ ಅದೇ ದ್ವೇಷದಿಂದ ಸ್ನೇಹಿತನನ್ನು ನಿಂದಿಸಿ ಟಿಪ್ಪರ್ ಹಾಯಿಸಿದ್ದ ಎನ್ನಲಾಗಿದೆ.
ಜನಾರ್ಧನ ಕೇಶವ ನಾಯ್ಕ ವಸಂತ ನಾಯ್ಕ ಹಾಗೂ ಓಲ್ವಿನ್ ರಸ್ತೆಯ ಪಕ್ಕ ಮಾತನಾಡುತ್ತ ನಿಂತಿರುವಾಗ ಟಿಪ್ಪರ್ ಹಾಯಿಸಿದ್ದ. ಆದರೆ, ಘಟನೆಯಲ್ಲಿ ಓಲ್ವಿನ್ ರವಿ ಲೋಬೋ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಜನಾರ್ದನ ನಾಯ್ಕ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ್ದಾರೆ. ವಸಂತ ನಾಯ್ಕ ಎಂಬುವವರಿಗೂ ಗಾಯಗಳಾಗಿದ್ದು, ಅವರ ಹೇಳಿಕೆ ಆಧರಿಸಿ ಹೊನ್ನಾವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net