ಸಚಿವೆ ಲಕ್ಷ್ಮೀ ಪ್ರಯತ್ನದಿಂದ ನೀರು ನಿರ್ವಹಣಾ ಘಟಕ

12Anand3
Published on

ಬೆಳಗಾವಿ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶೇಷ ಪ್ರಯತ್ನದಿಂದ ಸುಮಾರು 4.48 ಕೋಟಿ ರೂ. ವೆಚ್ಚದಲ್ಲಿ ನೀರು ನಿರ್ವಹಣಾ ಘಟಕ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಹೇಳಿದರು.'

ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮದಲ್ಲಿ ನೀರು ನಿರ್ವಹಣಾ ಘಟಕ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿ ಮೂಲಕ ಗ್ರಾಮದ ಕೊಳಚೆ ನೀರನ್ನು ನೀರು ನಿರ್ವಹಣಾ ಘಟಕಕ್ಕೆ ವರ್ಗಾಯಿಸಿ, ಫಿಲ್ಟರ್ ಮಾಡಲಾಗುವುದು. ನಂತರ ರೈತರ ಗದ್ದೆಗಳಿಗೆ ನೀರು ಬಿಡುವ ಗುರಿ ಹೊಂದಲಾಗಿದೆ. ಇದು ಗ್ರಾಮದ ನೈರ್ಮಲ್ಯದ ಜತೆಗೆ ಸ್ವಚ್ಛತೆ ಕಾಪಾಡಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಶಿಲ್ಪಾ ಪಾಟೀಲ, ಉಪಾಧ್ಯಕ್ಷ ವಿಠ್ಠಲ ಸಾಂಬ್ರೇಕರ್, ಮನೋಹರ ಮುಚ್ಚಂಡಿ, ತವನಪ್ಪ ಬಡಿಗೇರ, ಭರಮಪ್ಪ ಗೌಡಕೆಂಚಪ್ಪಗೋಳ, ರಾಮಾ ಕಾಕತ್ಕರ್, ಜ್ಯೋತಿಬಾ ಚೌಗುಲೆ, ಸಮೀರ್ ಸನದಿ, ಲಕ್ಷ್ಮೀ ಸಾಂಬ್ರೇಕರ್, ಅರ್ಜುನ ಪಾಟೀಲ, ರಮೇಶ ಹುಣಶೀಮರದ, ಮನೋಹರ ಬಾಂಡಗಿ, ಬಾಳಾರಾಮ ಪಾಟೀಲ, ಶಿವಾಜಿ ಕಾಕತ್ಕರ್, ಈರಪ್ಪ ಚೌಗುಲೆ, ಗುಂಡು ಪಾಟೀಲ, ಮಹಾವೀರ ಸಂಕೇಶ್ವರಿ, ಪದ್ಮರಾಜ ಪಾಟೀಲ, ಪಿಡಿಒ ಶ್ವೇತಾ ಡಿ.ಆರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net