

ನರಗುಂದ: ಪಟ್ಟಣದ ದಂಡಾಪುರದ 6ನೇ ಗಲ್ಲಿಯ ವೀರಭದ್ರೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ನೂತನ ಗೋಪುರ ನಿರ್ಮಾಣಕ್ಕೆ ಶಾಸಕ ಸಿ.ಸಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿ, ಮಂದಿರ ನಿರ್ಮಾಣ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್ ವಕ್ತಾರ ಡಾ. ಸಂಗಮೇಶ ಕೊಳ್ಳಿಯವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಪಂಚಗ್ರಹ ಗುಡ್ಡದ ಸಿದ್ಧ್ದಲಿಂಗ ಶಿವಾಚಾರ್ಯರು, ಪತ್ರಿವನ ಮಠದ ಡಾ. ಗುರುಸಿದ್ಧ್ದ ಶಿವಯೋಗಿ ಶಿವಾಚಾರ್ಯರು, ಬೈರನಹಟ್ಟಿ ಮತ್ತು ಶಿರೋಳ ಮಠಗಳ ಶಾಂತಲಿಂಗ ಸ್ವಾಮೀಜಿ, ನರಗುಂದ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರವೀಣ ಯಾವಗಲ್, ಪುರಸಭೆ ಅಧ್ಯಕ್ಷೆ ಅನ್ನಪೂರ್ಣಾ ಯಲಿಗಾರ, ಎಸ್.ಎ. ಕಾಳಗಿ, ರಾಜು ಕಲಾಲ, ಸುರೇಶ ಹುಯಿಲಗೋಳ, ರವಿ ಪಾಟೀಲ, ಪುರಸಭೆ ಸದಸ್ಯ ಅಪ್ಪಣಗೌಡ ನಾಯ್ಕರ್, ವಿ.ಎನ್. ಕೊಳ್ಳಿಯವರ, ಇತರರಿದ್ದರು.