ರಸ್ತೆ ಸುಧಾರಣೆ ಕಾಮಗಾರಿ ಶೀಘ್ರ ಆರಂಭ

17 HBD 4
ಹುಮನಾಬಾದ್‌ನ ಕೆಇಬಿ ಕಚೇರಿ ಬಳಿಮಂಗಳವಾರ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಭೂಮಿ ಪೂಜೆ ನೆರವೇರಿಸಿದರು. ಪುರಸಭೆ ಸದಸ್ಯರಾದ ವಿಜಯಕುಮಾರ ದುರ್ಗದ, ಸುನೀಲ ಪಾಟೀಲ್, ಪ್ರಮುಖರಾದ ವಿನಾಯಕ ಮಂಡಾ, ಸಂತೋಷ ಪಾಟೀಲ್, ಅನೀಲ ಪಸರ್ಗಿ, ವೈಜಿನಾಥ ಪಾಟೀಲ್, ಮಲ್ಲಿಕಾರ್ಜುನ ಸೀಗಿ, ಮಾಣಿಕರೆಡ್ಡಿ ಕರ್ಣಿ ಇದ್ದರು.
Published on

ಹುಮನಾಬಾದ್: ಪಟ್ಟಣದ ಪ್ರವಾಸಿ ಮಂದಿರದಿಂದ ಎಸ್‌ಬಿಐ ಬ್ಯಾಂಕ್‌ವರೆಗೆ ನಡೆದಿರುವ ರಸ್ತೆ ಸುಧಾರಣೆ ಮಾದರಿಯಲ್ಲಿಯೇ ಕೆಇಬಿ ಬೈಪಾಸ್‌ದಿಂದ ಎಸ್‌ಬಿಐ ಬ್ಯಾಂಕ್‌ವರೆಗಿನ ಮುಖ್ಯರಸ್ತೆಯ ಸುಧಾರಣೆ ಹಾಗೂ ಡಾಂಬರೀಕರಣ ಕಾಮಗಾರಿ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಪಟ್ಟಣದ ಕೆಇಬಿ ಕಚೇರಿ ಬಳಿ ಮಂಗಳವಾರ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಸ್ತೆ ಹದಗೆಟ್ಟು ಹೋಗಿದ್ದರಿಂದ ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ೫ ಕೋಟಿ ರೂ. ಅಪೆಂಡಿಕ್ಸ್ ಯೋಜನೆಯಡಿ ಮಂಜೂರಾಗಿದ್ದಲ್ಲದೆ ಟೆಂಡರ್ ಸಹ ಆಗಿದೆ. ನಾಲ್ಕೈದು ದಿನದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.

ಪುರಸಭೆ ಸದಸ್ಯರಾದ ವಿಜಯಕುಮಾರ ದುರ್ಗದ, ಸುನೀಲ ಪಾಟೀಲ್, ಪ್ರಮುಖರಾದ ವಿನಾಯಕ ಮಂಡಾ, ಸಂತೋಷ ಪಾಟೀಲ್, ಅನೀಲ ಪಸರ್ಗಿ, ವೈಜಿನಾಥ ಪಾಟೀಲ್, ಮಲ್ಲಿಕಾರ್ಜುನ ಸೀಗಿ, ಮಾಣಿಕರೆಡ್ಡಿ ಕರ್ಣಿ, ಗಿರೀಶ ತುಂಬಾ, ನಾಗಭೂಷಣ ಸಂಗಮ, ಮಧುಕರ ಹಿಲಾಲಪುರ, ರವಿ ಗಡವಂತಿ, ಗೋಪಾಲಕೃಷ್ಣ ಮೋಹಳೆ, ಪರಮೇಶ್ವರ ಕಾಳಮದರಗಿ ಇತರರಿದ್ದರು.

ರೈತರಿಗೆ ತೊಂದರೆ ನೀಡಿದರೆ ಸಹಿಸುವುದಿಲ್ಲ: ವಿದ್ಯುತ್ ಟಿಸಿ ಅಳವಡಿಸುವಲ್ಲಿ ವಿಳಂಬ ನೀತಿ ಅನುಸರಿಸಿ ರೈತರಿಗೆ ಜೆಸ್ಕಾಂ ಅಧಿಕಾರಿಗಳು ತೊಂದರೆ ನೀಡಿದರೆ ಸಹಿಸುವುದಿಲ್ಲ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಎಚ್ಚರಿಕೆ ನೀಡಿದರು. ಕಾಮಗಾರಿ ಭೂಮಿ ಪೂಜೆ ನಂತರ ಪಕ್ಕದಲ್ಲಿದ್ದರುವ ಜೆಸ್ಕಾಂ ಕಚೇರಿಗೆ ತೆರಳಿ ಇಇ ಶಂಕರ ಅಡಕಿ ಜತೆ ಚರ್ಚಿಸಿದ ಅವರು, ಕೆಲವಡೆ ಟಿಸಿ ಸುಟ್ಟು ವಾರ ಕಳೆದರೂ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎನ್ನುವುದು ಸೇರಿ ಇತರ ಸಮಸ್ಯೆಗಳ ಬಗ್ಗೆ ನನ್ನ ಬಳಿ ರೈತರಿಂದ ದೂರು ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಸುಧಾರಣೆಗೆ ಕ್ರಮ ವಹಿಸುವಂತೆ ತಿಳಿಸಿದರು. ಇಇ ಶಂಕರ ಅಡಕಿ ಅವರು ಇಂತಹ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಸಭೆ ನಡೆಸಿ ಜನರ ಸಮಸ್ಯೆಗಳ ಸ್ಪಂದನೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net