

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಗ್ರಾಮೀಣ ಭಾಗದಲ್ಲಿ ಕಂಡುಬರುವ ಗುಣಮಟ್ಟದ ರಸ್ತೆ, ಚರಂಡಿ ಸೇರಿ ಇತರ ಮೂಲಸೌಕರ್ಯಗಳು ಆಯಾ ಗ್ರಾಮಗಳ ಪ್ರಗತಿಯ ಸಂಕೇತ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಮುಗಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಹಲಸಹಳ್ಳಿ ಮತ್ತು ನಿಡಘಟ್ಟ ಗ್ರಾಮದಲ್ಲಿ ಕೆಆರ್‌ಡಿಎಲ್ ಮತ್ತು ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ 35 ಲಕ್ಷ ರೂಪಾಯಿ ಮೊತ್ತದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಹಾಗೂ ದೊಡ್ಡನಲ್ಲಾಳ ಗ್ರಾಪಂ ವ್ಯಾಪ್ತಿಯ ದೊಡ್ಡನಲ್ಲಾಳ, ಚಿಕ್ಕನಲ್ಲಾಳ, ದಬ್ಬಗುಂಟೆ, ದೊಡ್ಡದೇನಹಳ್ಳಿ ಉಮ್ಮಲು ಗ್ರಾಮಗಳಲ್ಲಿ ಒಟ್ಟು 1.5 ಕೋಟಿ ವಚ್ಚದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಸರ್ಕಾರದ ವಿವಿಧ ಯೋಜನೆಗಳಿಂದ ಗ್ರಾಮಗಳ ಅಭಿವೃದ್ಧಿಗಾಗಿ ಹಣ ತಂದು ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಗುಣಮಟ್ಟ ಕಾಯ್ದುಕೊಳ್ಳುವುದು, ಜನಪ್ರತಿನಿಧಿಗಳ ಜತೆಗೆ ಗ್ರಾಮಸ್ಥರು ಕೂಡ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಭಾಗ್ಯಾ ನಾಗರಾಜ್ ಮಾತನಾಡಿ, ಹಲಸಹಳ್ಳಿ ಮತ್ತು ನಿಡಘಟ್ಟದಲ್ಲಿ ಹಲವು ಮಣ್ಣಿನ ರಸ್ತೆಗಳು ಡಾಂಬರು ಕಂಡಿರಲಿಲ್ಲ. ಶಾಸಕರ ಗಮನಕ್ಕೆ ತಂದು ಅಂತಹ ರಸ್ತೆಗಳ ಅಭಿವೃದ್ಧಿಗೆ ಹಲಸಹಳ್ಳಿಯಲ್ಲಿ 20 ಲಕ್ಷ ಮತ್ತು ನಿಡಗಟ ಗ್ರಾಮದಲ್ಲಿ 15 ಲಕ್ಷ ಮೊತ್ತದಲ್ಲಿ ರಸ್ತೆಗಳ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ್ದು ಶೀಘ್ರವಾಗಿ ಕಾಮಗಾರಿ ಮುಗಿಸಿ ಗ್ರಾಮಸ್ಥರ ಸಂಚಾರಕ್ಕೆ ಅನುವು ಮಾಡಲಾಗುತ್ತದೆ ಎಂದರು.