ರಾಜಕಾಲುವೆ ಕಾಮಗಾರಿಗೆ ಭೂಮಿಪೂಜೆ

2sep-dgs-1-road-photo
Published on

ನ್ಯಾಮತಿ: ಇಲ್ಲಿನ ಸ್ಥಳೀಯರ ಬೇಡಿಕೆಯಂತೆ ಕಲ್ಮಠದಿಂದ ಕೋಡಿಕೊಪ್ಪ ರಸ್ತೆ ಆಲದ ಮರದ ವರೆಗಿನ 62ಲಕ್ಷ ರೂ. ವೆಚ್ಚದ ರಾಜಕಾಲುವೆ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಜಿ.ಶಾಂತನಗೌಡ ಪಟ್ಟಣದ ಕೊಡಿಕೊಪ್ಪ ರಸ್ತೆಯ ಕಲ್ಮಠ ಬಳಿ ಗುದ್ದಲಿ ಪೂಜೆ ನೆರವೇರಿಸಿದರು.
ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ, ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಗುಂಡೂರರ ಲೋಕೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯೂನುಸ್ ಬಾಷಾ, ಮಹಿಳಾ ಘಟಕದ ಅಧ್ಯಕ್ಷೆ ವನಜಾಕ್ಷಮ್ಮ, ರವಿತೊಂಟದಾರ್ಯ, ಹೊಸಮನೆ ಮಲ್ಲಿಕಾರ್ಜುನ ಕುಂಬಾರ, ಗಣೇಶಪ್ಪ ಕುಂಬಾರ, ಗುತ್ತಿಗೆದಾರ ಪಂಚಪ್ಪ ಸೇರಿದಂತೆ ಸ್ಥಳಿಯ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net