

ನಾಪೋಕ್ಲು: ಸಮೀಪದ ಬಿದಾಟಂಡ ವಾಡೆ ರಸ್ತೆಯಿಂದ ನಾಪೋಕ್ಲು ಸಂಪರ್ಕ ರಸ್ತೆ ಹಾಗೂ ಕೋಟೇರಿ ರಸ್ತೆ, ಮೂಟೇರಿ ಸಂಪರ್ಕ ರಸ್ತೆ ಕಾಮಗಾರಿಗೆ ಬಿದ್ದಾಟಂಡ ವಾಡೆ ಸಮೀಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಕಳೆದ ಬಾರಿ ಬಿದ್ದಾಟಂಡ ವಾಡೆ ಕೋಲಾಟಕ್ಕೆ, ಆಗಮಿಸಿದ್ದ ಸಂದರ್ಭ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ನೀಡಿದ್ದ ಆಶ್ವಾಸನೆಯಂತೆ ಅವರ ಅನುದಾನದಿಂದ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ವಲಯದ ಅಧ್ಯಕ್ಷ ಮಾಚೇಟ್ಟಿರ ಕುಶು ಕುಶಾಲಪ್ಪ ಮಾತನಾಡಿ, ಕಾಮಗಾರಿ ನಡೆಯುವ ಸಂದರ್ಭ ಯಾವುದೇ ರೀತಿಯ ರಾಜೀ ಮಾಡಿಕೊಳ್ಳದೆ, ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲು ಗ್ರಾಮಸ್ಥರು ಆಗಾಗ್ಗೆ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿದ್ದಾಟಂಡ ತಮ್ಮಯ್ಯ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಲ್ಲೇಟಿರ ಹೇಮಾ ಅರುಣ್, ಸದಸ್ಯರಾದ ಸಾಬತಿಮ್ಮಯ್ಯ, ಕುಲ್ಲೇಟಿರ ಅರುಣ್ ಬೇಬಾ, ಪಟ್ರಪಂಡ ಮೋಹನ್, ಗ್ರಾಮಸ್ಥರಾದ ಬಿದ್ದಾಟಂಡ ಡಿಕ್ಕಿ, ದಿನೇಶ್, ಕಾರ್ಯಪ್ಪ, ರೋಜಿ ಚಿನ್ನಪ್ಪ, ಮಮತಾ, ಜೀನ್ನು ನಾಣಯ್ಯ, ಫುಲ್ಲೇರ ಪದ್ಮಿನಿ , ಗಂಗಮ್ಮ ,ಅಪ್ಪಾರಂಡ ಸುಭಾಷ್ ತಿಮ್ಮಯ್ಯ, ಬಿದ್ದಾಟಂಡ ಹಾಗೂ ಪುಲ್ಲೆರ ಕುಟುಂಬಸ್ಥರು ಉಪಸ್ಥಿತರಿದ್ದರು.
----------
12-ಎನ್ ಪಿ ಕೆ-1.
ನಾಪೋಕ್ಲು ಸಮೀಪದ ಬಿದಾಟಂಡ ವಾಡೆ ರಸ್ತೆಯಿಂದ ನಾಪೋಕ್ಲು ಸಂಪರ್ಕ ರಸ್ತೆ ಕಾಮಗಾರಿಗೆ ವನಜಾಕ್ಷಿ ರೇಣುಕೇಶ್ ಭೂಮಿಪೂಜೆ ನೆರವೇರಿಸಿದರು.ಕುಶು ಕುಶಾಲಪ್ಪ, ಬಿದ್ದಾಟಂಡ ತಮ್ಮಯ್ಯ, ಕೆ.ಎ.ಇಸ್ಮಾಯಿಲ್, ಸಾಬತಿಮ್ಮಯ್ಯ, ಕುಲ್ಲೇಟಿರ ಅರುಣ್ ಬೇಬಾ ,ಪಟ್ರಪಂಡ ಮೋಹನ್ ಇತರರಿದ್ದರು.
---------