ಮಹಾದ್ವಾರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

New Mahadwar New
Published on

ಹುಬ್ಬಳ್ಳಿ : ಹುಬ್ಬಳ್ಳಿ -ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ 67ನೇ ವಾರ್ಡ್​ನ ಬಮ್ಮಾಪುರ ಬಣಗಾರ ಓಣಿಯಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮಹಾದ್ವಾರ ನಿರ್ಮಾಣ ಕಾಮಗಾರಿಗೆ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಮಹಾನಗರ ಪಾಲಿಕೆ ಅನುದಾನದ ಅಂದಾಜು 10 ಲಕ್ಷ ರೂ.ಗಳ ಅನುದಾನದಲ್ಲಿ ಈ ಕಾಮಗಾರಿ ಕೈಗೋಳ್ಳಲಾಗಿದೆ ಎಂದು ತಿಳಿಸಿದರು.

ಚಿಂದಿ ಓಣಿಯಲ್ಲಿ ಸಿಮೆಂಟ್ ರಸ್ತೆ ಕಾಮಗಾರಿ, ಪಿಂಜಾರ ಓಣಿಯಲ್ಲಿ ಯುಜಿಡಿ ಕಾಮಗಾರಿ, ಎಲಿಪೇಠ ಕ್ರಾಸ್ನಲ್ಲಿ ಯುಜಿಡಿ ಮತ್ತು ಕಾಂಕ್ರೀಟ್ ರಸ್ತೆ ನಿರ್ವಣಕ್ಕೆ ಅಂದಾಜು 30 ಲಕ್ಷ ರೂ. ಅನುದಾನದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಯಿತು ಎಂದು ತಿಳಿಸಿದರು.

ಬಿಜೆಪಿ ಪ್ರಮುಖರಾದ ಚಂದ್ರಶೇಖರ ಗೋಕಾಕ, ಸತೀಶ ಶೇಜವಾಡಕರ, ರಂಗಾ ಬದ್ದಿ, ಸುಭಾಸ ಅಥಣಿ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಶಂಕ್ರಪ್ಪ ಟೋಪಗಿ, ಬಸವರಾಜ ಕಡೆಮನಿ ಕಲ್ಲಪ್ಪ ಗುಡ್ಡದ ಗಂಗಾಧರಯ್ಯ ಹಿರೇಮಠ, ಇಷ್ಟಲಿಂಗ ಮಿರ್ಜಿ, ಮಲ್ಲಿಕಾರ್ಜುನ ಶಿರಗುಪ್ಪಿ, ಡಾ. ಮದುಕರ ದೇವದಾಸ, ಕೃಷ್ಣಾ ಸೂರ್ಯವಂಶಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net