ದೊಡ್ಡಪಟ್ಟಣಗೆರೆ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

9KDR1
Published on

ಕಡೂರು: ಕಂಸಾಗರದಿಂದ ದೊಡ್ಡಪಟ್ಟಣಗೆರೆ ಹಳ್ಳದವರೆಗೆ ಗ್ರಾಮಕ್ಕೆ ತೆರಳುವ ಮಾರ್ಗದ ರಸ್ತೆ ನಡುವಿನ ಸೇತುವೆ ಕಾಮಗಾರಿಗೆ ಕ್ಷೇತ್ರದ ಶಾಸಕರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಕಂಸಾಗರದ ರೇವಣ್ಣ ತಿಳಿಸಿದರು.

ಕಂಸಾಗರ ಗ್ರಾಮದಲ್ಲಿ 4 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಕಂಸಾಗರದಿಂದ ದೊಡ್ಡಪಟ್ಟಣಗೆರೆ ಹಳ್ಳದವರೆಗೆ ಗ್ರಾಮಕ್ಕೆ ತೆರಳುವ ಮಾರ್ಗದ ರಸ್ತೆಗೆ ಶಾಸಕ ಆನಂದ್ 4 ಲಕ್ಷ ಅನುದಾನ ನೀಡಿದ್ದಾರೆ. ಕಂಸಾಗರದ ಶ್ರೀಕರಿಯಮ್ಮ ದೇವಾಸ್ಥಾನಕ್ಕೆ 8 ಲಕ್ಷ, ಗ್ರಾಮದ ಹರಿಜನ ಕಾಲನಿಯ ದುರ್ಗಾಂಬಾ ದೇವಾಸ್ಥಾನಕ್ಕೆ 3ಲಕ್ಷ ರೂ. ಬಿಡುಗಡೆಯಾಗಿದೆ ಎಂದರು.

ಉಪನ್ಯಾಸಕ ಗೋಪಿನಾಥ್, ರೋಟರಿಯನ್ ಕೆ.ಶ್ರೀನಿವಾಸ್, ಕೆ.ಎಸ್.ಲೋಕೇಶ್, ಪದ್ಮನಾಭ, ಕೆ.ವಿ.ರಾಜಪ್ಪ, ಕೆ.ಎಸ್.ಚಂದ್ರಶೇಖರ್, ಕೆ.ಹೆಚ್.ಜ್ಞಾನೇಶ್, ಲಿಂಗರಾಜ್ ಹರೀಶ್, ಎಂ.ಪರಮೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net