

ಗುತ್ತಲ: ಶಿವನಗರದ ಎಸ್ಸಿ ಕಾಲನಿಯಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗೆ ವಿಧಾನ ಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಶನಿವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಪಟ್ಟಣದ ಎಲ್ಲ ವಾರ್ಡ್ಗಳ ಅಭಿವೃದ್ಧಿ, ಕುಡಿಯುವ ನೀರು, ಸ್ವಚ್ಛತೆ, ಕಸ ವಿಲೇವಾರಿ, ಬೀದಿ ದೀಪ ಅಳವಡಿಕೆ, ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ನಿವೇಶನ ರಹಿತರಿಗೆ ಹಾಗೂ ವಿವಿಧ ಸರ್ಕಾರಿ ಕಟ್ಟಡ ನಿರ್ವಿುಸಲು 10-15 ಎಕರೆ ಪ್ರದೇಶ ಖರೀದಿಸುವ ಸಲುವಾಗಿ ಜಮೀನು ನೀಡುವವರ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಕೃಷಿ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಈ ಸ್ವತ್ತು ಸಿಗುತ್ತಿಲ್ಲ. ಈ ಬಗ್ಗೆ ಸದನ ಸಮಿತಿಯಲ್ಲಿ ರ್ಚಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷೆ ಮಾಳವ್ವ ಗೊರವರ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ಜಿಪಂ ಮಾಜಿ ಸದಸ್ಯ ಸಿ.ಬಿ ಕುರವತ್ತಿಗೌಡರ, ಡಾ.ಸುರೇಶ ಯಲ್ಲಟ್ಟಿ, ಪಪಂ ಸದಸ್ಯರಾದ ಅಜ್ಜಯ್ಯ ಬಂಡಿವಡ್ಡರ, ಪಾರವ್ವ ಲಮಾಣಿ, ದೀಪಾ ಲಮಾಣಿ, ಮಹ್ಮದಹನೀಫ್ ರಿತ್ತಿ, ಖಲೀಲಹ್ಮದ್ ಖಾಜಿ, ಎಸ್.ಜಿ. ಹೊನ್ನಪ್ಪನವರ, ನಿಂಗರಾಜ ನಾಯಕ, ಸಂತೋಷ ಲಮಾಣಿ, ಗುಡ್ಡಪ್ಪ ಗೊರವರ, ಹನುಮಂತ ಅಗಸಿಬಾಗಿಲದ, ವಿನೋದ ಗುತ್ತಲ, ಮಲ್ಲೇಶ ಲಮಾಣಿ, ಪ್ರಕಾಶ ಲಮಾಣಿ, ಭದ್ರಪ್ಪ ಲಮಾಣಿ, ಸುರೇಶ ಲಮಾಣಿ, ಇತರರಿದ್ದರು.