ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

IMG-20240619-WA0134
ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಹುಲ್ಲೆಕೆರೆ ಗ್ರಾಮದಲ್ಲಿ ರಸ್ತೆ ಒಳಚರಂಡಿ ಕಾಮಗಾರಿಗೆ ಶಾಸಕ ಶಿವಲಿಂಗೇಗೌಡ ಬುಧವಾರ ಭೂಮಿಪೂಜೆ ನೆರವೇರಿಸಿದರು. ತಾಪಂ ಮಾಜಿ ಸದಸ್ಯ ರೂಪೇಶ್, ಮಂಜುರಾಜ್, ದೊರೆ, ರವಿ, ಮುನಿರಾನಜ್ ಇದ್ದರು.
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಗಂಡಸಿ ಹೋಬಳಿ ಹುಲ್ಲೆಕೆರೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಗ್ರಾಮ ಪರಿಮಿತಿಯಲ್ಲಿ 1.10 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಬುಧವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಬೇಕಾದ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಚರಂಡಿ, ಸಮುದಾಯ ಭವನಗಳನ್ನು ಜನತೆಗೆ ಒದಗಿಸುತ್ತಿದ್ದೇನೆ. ಈ ಅಭಿವೃದ್ಧಿ ಕಾರ್ಯಗಳನ್ನು ಜನತೆ ಒಪ್ಪಿಕೊಂಡು ನನ್ನನ್ನು ಸತತವಾಗಿ ನಾಲ್ಕು ಬಾರಿ ಬೆಂಬಲಿಸಿ ಶಾಸಕನನ್ನಾಗಿ ಮಾಡಿದ್ದಾರೆ. ಈಗ ನಮ್ಮ ಸರ್ಕಾರವು ಆಡಳಿತದಲ್ಲಿದ್ದು, ಇನ್ನೂ ಹೆಚ್ಚಿನ ಅನುದಾನ ತಂದು ಅರಸೀಕೆರೆ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಮುಂದಿನ ಕೆಲವೇ ದಿನಗಳಲ್ಲಿ ಎತ್ತಿನ ಹೊಳೆಯಿಂದ ನೀರು ಹರಿಸಲಾಗುವುದು ಎಂದರು.

ತಾಪಂ ಮಾಜಿ ಸದಸ್ಯ ರೂಪೇಶ್, ಮುಖಂಡರಾದ ಮಂಜುರಾಜು, ದೊರೆ, ರವಿ ಲೋಕೋಪಯೋಗಿ ಎಇಇ ಮುನಿರಾಜು, ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net