

ಹುಮನಾಬಾದ್: ಗ್ರಂಥಾಲಯ ಹಾಗೂ ಶಾಲಾ ಕೋಣೆ ನಿರ್ಮಾಣ ಕಾಮಗಾರಿ ಕಳಪೆಯಾಗಿದ್ದಲ್ಲಿ ಸಂಬಂಧಿತರೇ ಹೊಣೆ ಹೊರಬೇಕಾಗುತ್ತದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲï ಎಚ್ಚರಿಸಿದರು.
ಪಟ್ಟಣದಲ್ಲಿ ಮಂಗಳವಾರ ೨೦೨೪-೨೫ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಗ್ರಂಥಾಲಯ ಕಟ್ಟಡ ಹಾಗೂ ಶಾಲಾ ಕೋಣೆಗಳ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ಕಾಳೋರಲಿಂಗೇಶ್ವರ ಶಾಲೆ ಹತ್ತಿರ ಒಂದು ಕೋಟಿ ರೂ. ಅಂದಾಜು ವೆಚ್ಚದ ಸುಸಜ್ಜಿತ ಡಿಜಿಟಲ್ ಗ್ರಂಥಾಲಯ ಹಾಗೂ ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಒಂದು ಕೋಟಿ ವೆಚ್ಚದ ಬಾಲಕರ ಫ್ರೌಢ ಶಾಲೆಯ ೯ ಕೋಣೆ ನಿರ್ಮಾಣ ಕೆಲಸ ಗುಣಮಟ್ಟದಿಂದ ನಿಗದಿತ ಅವಧಿಯೊಳಗೆ ಮುಗಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಉಪಪ್ರಾಂಶುಪಾಲ ಸಂತು ದೇವಿಂದ್ರ, ಶಿಕ್ಷಕರಾದ ಶಿವಕುಮಾರ ನಿಂಬೂರೆ, ಮೆಹಬೂಬ್ ಪಾಟೀಲ್, ವೀರಂತರಡ್ಡಿ ಜಂಪಾ, ಅಬ್ದುಲ್ ತಾಂಬೆ, ಆರೀಫ್, ರವೀಂದ್ರ, ಸಾರಿಕಾ, ಪ್ರವೀಣಾ, ತ್ರಿವೇಣಿ, ಪಕ್ಷದ ಪ್ರಮುಖರಾದ ಅನಿಲ ಪಸಾರ್ಗಿ, ಗೋಪಾಲಕೃಷ್ಣ ಮೋಹಳೆ, ಜ್ಞಾನದೇವ ಧುಮಾಳೆ, ಸಂತೋಷ ಪಾಟೀಲ್, ಪ್ರಭಾಕರ ನಾಗರಾಳೆ, ವೈಜಿನಾಥ ಪಾಟೀಲ್, ಪ್ರಕಾಶ ತಿಬಶೆಟ್ಟಿ, ಮಾಣಿಕ ರಡ್ಡಿ, ಸಂಜು ವಾಡೇಕರ ಇತರರಿದ್ದರು.