ವಸತಿಗೃಹ ನಿರ್ಮಾಣಕ್ಕೆ ಭೂಮಿಪೂಜೆ

15ark-1
ಅರಕಲಗೂಡು ಪೊಲೀಸ್ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ಶಾಸಕ ಎ. ಮಂಜು ಭೂಮಿ ಪೂಜೆ ಮಾಡಿದರು. ವಸಂತ್, ಕಾವ್ಯ ಇತರರು ಇದ್ದರು.
Published on

ಅರಕಲಗೂಡು: ಪಟ್ಟಣದಲ್ಲಿ ಪೊಲೀಸ್ ವಸತಿಗೃಹ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಮಂಜು ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.

ಬಳಿಕ ಶಾಸಕರು ಮಾತನಾಡಿ, 3.27 ಕೋಟಿ ರೂ. ವೆಚ್ಚದಲ್ಲಿ 980 ಚ.ಮೀ. ವಿಸ್ತೀರ್ಣದಲ್ಲಿ ವಸತಿಗೃಹಗಳು ನಿರ್ಮಾಣವಾಗಲಿವೆ. ಇದರಿಂದ ಪೊಲೀಸ್ ಇಲಾಖೆ ಸಿಬ್ಬಂದಿ ವಸತಿ ಸಮಸ್ಯೆ ನಿವಾರಣೆಯಾಗಲಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು. ಸಿಪಿಐ ವಸಂತ್, ಪಿಎಸ್‌ಐ ಕಾವ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net