

ಸೋಮವಾರಪೇಟೆ: ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಕ್ಲಾಕ್ ಟವರ್ ನಿರ್ಮಾಣಕ್ಕೆ ದಾನಿಗಳು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ ಶನಿವಾರ ಭೂಮಿಪೂಜೆ ನೆರವೇರಿಸಿದರು. ಜೆಸಿಐ ಅಧ್ಯಕ್ಷ ಎಸ್.ಆರ್.ವಸಂತ್ ಮಾತನಾಡಿ, 3.50 ಲಕ್ಷ ರೂ., ವೆಚ್ಚದಲ್ಲಿ ಕ್ಲಾಕ್ ಟವರ್ ನಿರ್ಮಾಣವಾಗಲಿದೆ. ಪ್ರಸಕ್ತ ವರ್ಷದ ಜೆಸಿಐ ಥೀಮ್ ಸಮಯಪಾಲನೆ ಎಂಬುದಾಗಿದ್ದು, ಈ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮಹೇಶ್, ಜೆಸಿಐ ಸ್ಥಾಪಕ ಅಧ್ಯಕ್ಷ ತೇಜಸ್ವಿ, ವಲಯ ಕಾರ್ಯದರ್ಶಿ ಮಾಯಾ ಗಿರೀಶ್, ಜೆಜೆಸಿ ಉಪಾಧ್ಯಕ್ಷೆ ಎ.ಆರ್.ಮಮತಾ, ಜೆಸಿಐ ಕಾರ್ಯದರ್ಶಿ ಜಗದಾಂಬಾ ಗುರುಪ್ರಸಾದ್, ಖಜಾಂಚಿ ಪುಷ್ಪಕ್ ಇದ್ದರು.