ಚೆಕ್ ಡ್ಯಾಮ್, ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ

ತಿರುಮಲಪುರ ಗ್ರಾಮದಲ್ಲಿ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ ಸಚಿವ ಕೆ.ವೆಂಕಟೇಶ್ ಭೂಮಿಪೂಜೆ ನೆರವೇರಿಸಿದರು. ರಘು, ಟಿ.ಡಿ.ಸ್ವಾಮಿ, ಧನರಾಜ್ ಶೇಖರ್ ಇತರರು ಇದ್ದರು.
ತಿರುಮಲಪುರ ಗ್ರಾಮದಲ್ಲಿ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ ಸಚಿವ ಕೆ.ವೆಂಕಟೇಶ್ ಭೂಮಿಪೂಜೆ ನೆರವೇರಿಸಿದರು. ರಘು, ಟಿ.ಡಿ.ಸ್ವಾಮಿ, ಧನರಾಜ್ ಶೇಖರ್ ಇತರರು ಇದ್ದರು.
Published on

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿ ತಿರುಮಲಪುರ- ಗಾಂಧಿನಗರ ಮಧ್ಯ ಇರುವ ಹಳ್ಳಕ್ಕೆ ಅಡ್ಡಲಾಗಿ ಚೆಕ್ ಡ್ಯಾಮ್ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಇದೇ ವೇಳೆ ಗ್ರಾಮಸ್ಥರ ಕುಂದು-ಕೊರತೆ ಆಲಿಸಿದರು. ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.

ಆವರ್ತಿ ಗ್ರಾಪಂ ವ್ಯಾಪ್ತಿಯ ಮುತ್ತಿನ ಮುಳಸೋಗೆ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಕುಂದು-ಕೊರತೆ ಆಲಿಸಿದ ಸಚಿವರು, ಹಿಂದೆ ನನ್ನ ಅವಧಿಯಲ್ಲೇ ಗ್ರಾಮಗಳ ರಸ್ತೆ, ಸಮುದಾಯ ಭವನ, ಚರಂಡಿ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮುಂದೆಯೂ ಅಭಿವೃದ್ಧಿಗೆ ಶ್ರಮಿಸಲಾಗುವುದು. ಗ್ರಾಮದ ಜನರು ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ್ ನಿಸರ್ಗಪ್ರಿಯಾ, ಸಿಡಿಪಿಒ ಮಮತಾ, ಬೈಲಕುಪ್ಪೆ ಗ್ರಾಪಂ ಅಧ್ಯಕ್ಷ ರಘು, ಸದಸ್ಯರಾದ ರಾಜು, ನಿಶಾರ್ ಅಹ್ಮದ್, ಹರೀಶ್, ಮಾಜಿ ಸದಸ್ಯ ಮಂಜೇಶ್, ಆವರ್ತಿ ಗ್ರಾಪಂ ಅಧ್ಯಕ್ಷ ಶಶಿಕಲಾ ವೆಂಕಟೇಶ್, ಸದಸ್ಯರಾದ ಎಂ.ಬಿ.ಶಿವಕುಮಾರ್, ಎಂ.ಟಿ.ನಾಗಪ್ಪ, ಮುತ್ತಿನ ಮೂಳೆಸೋಗೆ ಡೇರಿ ಅಧ್ಯಕ್ಷ ಚಂದ್ರಶೇಖರ್, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಾದ ಈಶ್ವರ, ಸೋಮಣ್ಣ, ಗುತ್ತಿಗೆದಾರ ಚಂದ್ರಪ್ಪ, ಕಾಂಗ್ರೆಸ್ ಮುಖಂಡರಾದ ರೆಹಮದ್ ಜಾನ್ ಬಾಬು, ಟಿ.ಡಿ.ಸ್ವಾಮಿ, ಶೇಕ್ ಅಸ್ಲಾಂ, ಚನ್ನಕಲ್ ಶೇಖರ್, ಧನರಾಜ್, ಶಿವು, ಪುಟ್ಟರಾಜು, ಮುಖಂಡರಾದ ರಾಮೇಗೌಡ, ಮಂಜೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net