

ವಿಜಯಪುರ: ನಗರದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.
ಮಹಾನಗರ ಪಾಲಿಕೆ ವಾರ್ಡ್ ನಂ.32 ರ ವ್ಯಾಪ್ತಿಯ ಅಗಸರ ಓಣಿಯಲ್ಲಿ ಲೋಕೋಪಯೋಗಿ ಇಲಾಖೆಯ ರೂ.1 ಕೋಟಿ ಅನುದಾನದಲ್ಲಿ ಜೋರಾಪುರ ಪೇಟ, ಬಣಗಾರ ಓಣಿ ಹಾಗೂ ಅಗಸರ ಓಣಿಯಲ್ಲಿ ಆಂತರಿಕ ಸಿಸಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಬಳಿಕ ಸಮಸ್ಯೆಗಳ ಪರಿಹಾರಕ್ಕಾಗಿ ಆಗಮಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಪರಿಹರಿಸುವ ಭರವಸೆ ನೀಡಿದರು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು.
ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮುಖಂಡರಾದ ಮಹೇಶ ಹೆರಲಗಿ, ಸೂರಪ್ಪ ಮಿರ್ಜಿ, ರಾಜಶೇಖರ ಹುಣಶ್ಯಾಳ, ಸತೀಶ ಅಗಸರ, ಶಶಿಕಾಂತ ಜವಳಿ, ಆನಂದ ಸಲ್ಪೇಕರ, ಶಿವಾನಂದ ಗಿಡವೀರ, ವಿನೋದ ತೆಲಸಂಗ, ದ್ರಾಕ್ಷಾಯಣಿ ಮಠಪತಿ, ಮಲ್ಲಮ್ಮ ಜೋಗೂರ, ಗೀತಾ ಗಿಡವೀರ, ಅನೀತಾ ಕೇಶೆಟ್ಟಿ, ಲಿಂಗರಾಜ ಶಹಾಪುರ, ಪ್ರಶಾಂತ ಕೇಶೆಟ್ಟಿ, ಶ್ರೀಶೈಲ ಅಗಸರ, ಶಂಕರ ಬನ್ನೂರ, ಸುಧಾಕರ ಹಿರೇಮಠ, ಉಮಾಕಾಂತ ಹೆರಲಗಿ, ದಿನೇಶ ಅಗಸರ, ವಿರೇಶ ಹಿರೇಮಠ, ಸುವರ್ಣ ಕುರ್ಲೆ, ಸ್ಮೀತಾ ಹುಣಶ್ಯಾಳ, ಪಾವಡೆಪ್ಪ ಗಿಡವೀರ, ಈರಪ್ಪ ಕುರ್ಲೆ ಮತ್ತಿತರರಿದ್ದರು.