

ಕೊಕ್ಕರ್ಣೆ: ಜಿಎಸ್‌ಬಿ ಹಿತರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ಜಿಎಸ್‌ಬಿ ಸೇವಾ ಸಂಘ ಶಿರಿಯಾರ ಸಾಬ್ರಕಟ್ಟೆ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ತೀರ ಹಿಂದುಳಿದ ಕಾಜ್ರಳ್ಳಿಯ ನಾಗೇಶ ಪ್ರಭು ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಯೋಜನೆ ಹಾಕಿಕೊಂಡಿದ್ದು ಈ ಪ್ರಯುಕ್ತ ಭೂಮಿ ಪೂಜೆ ಜರುಗಿತು.
ಬಸ್ರೂರು ಶ್ರೀಗೋಕರ್ಣ ಮಠದ ಪುರೋಹಿತ ಮಹೇಶ್ ಭಟ್ ಭೂಮಿಪೂಜೆ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಸತೀಶ್ ಹೆಗ್ಡೆ ಕೋಟ, ಸಂಚಾಲಕ ಆರ್.ವಿವೇಕಾನಂದ ಶೆಣೈ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಶುಭ ಹಾರೈಸಿದರು. ಜಿಎಸ್‌ಬಿ ಸೇವಾ ಸಂಘ ಶಿರಿಯಾರ ಸಾಬ್ರಕಟ್ಟೆ ಸದಸ್ಯರಾದ ಮಧುವನ ಮಾಧವ ಹೆಗ್ಡೆ, ಅಶೋಕ ಪ್ರಭು, ಮಧುವನ ಗಣೇಶ್ ನಾಯಕ್, ರವೀಂದ್ರನಾಥ ಕಿಣಿ, ಮಹೇಶ ಶೆಣೈ ಗಾವಳಿ, ರವಿಪ್ರಕಾಶ ಪ್ರಭು ಗಾವಳಿ, ವಿಶ್ವನಾಥ ಶ್ಯಾನುಭಾಗ್, ಶಿವಾನಂದ ಶ್ಯಾನುಭಾಗ್, ಕೃಷ್ಣಮೂರ್ತಿ ಕಾಮತ್ ಯಡ್ತಾಡಿ, ನಿತ್ಯಾನಂದ ಪೈ ಕಾಜ್ರಳ್ಳಿ, ಸುಭಾಷ್ ಪ್ರಭು ಕಾಜ್ರಳ್ಳಿ, ಸುರೇಶ್ ಮಲ್ಯ, ಪ್ರಮೀಳಾ ಪ್ರಭು, ಯಶೋದಾ ಮಲ್ಯ, ಕಾವ್ಯ ಹೆಗ್ಡೆ, ಚಂದ್ರಕಲಾ ಪೈ, ಸವಿತಾ ಪ್ರಭು, ವಿದ್ಯಾ ಶ್ಯಾನುಭಾಗ್, ಸಂಪತ್ ನಾಯಕ್, ಪಿ.ವಿದ್ಯಾನಂದ ಶರ್ಮ ಕಾರ್ಕಳ, ಸಿದ್ದಾಪುರ ವಾಸುದೇವ ಪೈ, ಉಡುಪಿ ದಾನಿಗಳಾದ ರಾಧಾಕೃಷ್ಣ ನಾಯಕ್ ಕೋಟ, ವೈಜಯಂತಿ ಕಾಮತ್, ಅನಂತ ಪೈ, ಕಲ್ಪನಾ ಅನಂತ ಪೈ ಮತ್ತಿತರರು ಉಪಸ್ಥಿತರಿದ್ದರು.