

ಸವಣೂರ: ತಾಲೂಕಿನ ಕಾರಡಗಿ ಗ್ರಾಮದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸಭಾ ಭವನ ನಿರ್ಮಾಣ ಕಾಮಗಾರಿಗೆ ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ ಅವರು ಸೋಮವಾರ ಚಾಲನೆ ನೀಡಿದರು.
ಬಿಜೆಪಿ ಮಂಡಲ ನಿಕಟಪೂರ್ವ ಅಧ್ಯಕ್ಷ ಗಂಗಾಧರ ಬಾಣದ ಮಾತನಾಡಿ, ಸಂಸದರ ಅನುದಾನದಡಿ 10 ಲಕ್ಷ ರೂ. ವೆಚ್ಚದಲ್ಲಿ ಸಭಾ ಭವನ ನಿರ್ವಣಗೊಳ್ಳಲಿದೆ. ಸಭಾ ಭವನ ಉದ್ಘಾಟನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗಮಿಸಲಿದ್ದಾರೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಎಂ.ಕೆ. ಬಿಜ್ಜೂರ, ಎಪಿಎಂಸಿ ಮಾಜಿ ಅಧ್ಯಕ್ಷ ಬಸನಗೌಡ ಕೊಪ್ಪದ, ಪ್ರಮುಖರಾದ ವೆಂಕಟೇಶ ಕುಲಕರ್ಣಿ, ಲಾವಪ್ಪ ಕುರವತ್ತಿ, ನಿಂಗನಗೌಡ ಪಾಟೀಲ, ಗದಿಗೆಪ್ಪ ಕುರವತ್ತಿ, ಜಗದೀಶ ಸೊಪ್ಪಿನ, ಅಶೋಕ ಯಲಿಗಾರ, ನಾಗರಾಜ ವಾಲ್ಮೀಕಿ ಇತರರಿದ್ದರು.