ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ

bhoomipooje
Published on

ಮುಂಡರಗಿ: ಸಂಸದ ಶಿವಕುಮಾರ ಉದಾಸಿ ಅವರ 10 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾಗುವ ಕಿತ್ತೂರು ಚೆನ್ನಮ್ಮ ಸಮುದಾಯ ಭವನ ಕಾಮಗಾರಿಗೆ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ ಬುಧವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ‘ಸಮುದಾಯ ಭವನದ ಕಾರ್ಯಕ್ಕೆ ಸರ್ಕಾರದ ಅನುದಾನ, ಶಾಸಕರ, ಸಂಸದರ, ಹಾಗೂ ಸಮಾಜದವರ ಸಹಕಾರವು ಮುಖ್ಯವಾಗಿದೆ. ಎಲ್ಲರೂ ಒಗ್ಗೂಡಿಕೊಂಡು ಭವನ ನಿರ್ಮಿಸೋಣ’ ಎಂದರು.

ಡಾ.ಅನ್ನದಾನಿ ಮೇಟಿ, ಕೊಟ್ರಗೌಡ ಪಾಟೀಲ, ಪ್ರೊ.ಆರ್.ಎಲ್. ಪೋಲಿಸ್ ಪಾಟೀಲ, ಬಸವರಾಜ ದೇಸಾಯಿ, ಡಾ. ವಿ.ಕೆ. ಸಂಕನಗೌಡ್ರ, ಶಿವಪ್ಪ ಅಂಕದ, ಎ.ವೈ. ನವಲಗುಂದ, ಮಂಜುಳಾ ಇಟಗಿ, ಡಿ.ಟಿ. ಪಾಟೀಲ ಮಾತನಾಡಿದರು.

ಬಾಗೇವಾಡಿ ಗ್ರಾ.ಪಂ.ಅಧ್ಯಕ್ಷ ಮಲ್ಲಿಕಾರ್ಜುನ ಹಣಜಿ, ಹಮ್ಮಿಗಿ ಗ್ರಾ.ಪಂ. ಅಧ್ಯಕ್ಷ ಅಬಾಸಾಹೇಬ ಬಹದ್ದೂರ ದೇಸಾಯಿ, ಕೊರ್ಲಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ರಾಜಶೇಖರ ಗುಡ್ಲಾನೂರ ಅವರನ್ನು ಸಮುದಾಯದಿಂದ ಸನ್ಮಾನಿಸಲಾಯಿತು.

ಅಶೋಕ ಹಂದ್ರಾಳ, ಮಂಜುನಾಥ ಮುಧೋಳ, ವೀರೇಶ ಹಡಗಲಿ, ಸೋಮು ಹಕ್ಕಂಡಿ, ಬಿ.ಕೆ. ಪಾಟೀಲ, ಎ.ವಿ. ಹಳ್ಳಿಕೇರಿ, ಮಂಜುನಾಥ ಇಟಗಿ, ಕವಿತಾ ಉಳ್ಳಾಗಡ್ಡಿ, ನಾಗೇಶ ಹುಬ್ಬಳ್ಳಿ, ಬಸವರಾಜ ಕೊತಂಬರಿ, ಲೋಕಪ್ಪ ನಂದಿಕೋಲ, ಶಿವಪ್ಪ ಅಂಕದ, ಪ್ರಶಾಂತ ಗುಡದಪ್ಪನವರ, ದೇವಪ್ಪ ಇಟಗಿ, ರವೀಂದ್ರಗೌಡ ಪಾಟೀಲ, ಶಿವಾನಂದ ಕಮತರ, ರಮೇಶಗೌಡ ಪಾಟೀಲ, ಶರಣಪ್ಪ ಕಲ್ಲೂರು, ಈರಣ್ಣ ಮಜ್ಜಿಗಿ, ನಾಗರಾಜ ಮುರಡಿ, ರಾಕೇಶ ಹಳ್ಳಿಗುಡಿ, ಗಂಗಾಧರ ಬಳಿಗಾರ, ನೇತ್ರಾ ಭಾವಿಹಳ್ಳಿ, ಭಾರತಿ ಮುದ್ದಿ, ಫಕೀರಪ್ಪ ಉಳ್ಳಾಗಡ್ಡಿ, ಎಂ.ಎಸ್. ಹೊಟ್ಟಿನ, ಜಗದೀಶ ವಾಲಿ, ಬಸವರಾಜ ಬಣಕಾರ, ಆನಂದ ಉಮಚಗಿ, ಯುವರಾಜ ಹಂದ್ರಾಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net