

ಬೆಳಗಾವಿ: ತಾಲೂಕಿನ ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಮಾಜಿ ಸೈನಿಕ ಜಗದೀಶ ಪೂಜೇರಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿ, ಮಕ್ಕಳಿಗೆ ರಾಜ್ಯೋತ್ಸವ ಮಹತ್ವ ಹಾಗೂ ದೇಶಭಕ್ತಿಯ ಬೆಳೆಸಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ದೊಡ್ಡಯ್ಯ ಹಿರೇಮಠ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕರವೇಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿನ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಉಮೇಶ ಕೋಲಕಾರ, ಮಂಜುನಾಥ ಪಾಟೀಲ, ನಿರ್ಮಲಾ ಸೊಗಲಮಠ, ಸರಿತಾ ಮಳಗಲಿ, ಅನ್ನಪೂರ್ಣಾ ಚಚಡಿ, ರಮೇಶ ಮುನಿಯಪ್ಪನವರ, ಎಂ.ವಿ. ಪಾಟೀಲ ಇತರರಿದ್ದರು.