ಭುವನೇಶ್ವರಿ ದೇವಿ ಕನ್ನಡಿಗರ ಮಾತೆ

SDP FINAL
Published on

ಸಿದ್ದಾಪುರ: ಕನ್ನಡಿಗರ ಮಾತೆ ಎನಿಸಿದ ಭುವನಗಿರಿಯ ಭುವನೇಶ್ವರಿ ದೇವಿಯ ತಾಣವೂ ಜಾಗೃತ ಸ್ಥಳವಾಗಿ ಗುರುತಿಸಿಕೊಂಡಿದೆ. ಇಲ್ಲಿಯ ಸಾಂಸ್ಕೃತಿಕ, ಸಾಹಿತ್ಯಕ ಹಿನ್ನೆಲೆ ಗಣನೀಯವಾದುದು ಎಂದು ತಹಸೀಲ್ದಾರ್ ಮಧುಸೂಧನ ಆರ್. ಕುಲಕರ್ಣಿ ಹೇಳಿದರು.

ತಾಲೂಕಿನ ಶ್ರೀ ಕ್ಷೇತ್ರ ಭುವನಗಿರಿಯ ಭುವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಕನ್ನಡ ರಾಜ್ಯೋತ್ಸವದಂದು ಮಾತೃವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಮಾತನಾಡಿದರು. ಭುವನಗಿರಿ ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ಮುಖ್ಯಾಧ್ಯಾಪಕ ಆರ್.ಎಸ್. ಹೆಗಡೆ ಶಿರಸಿ, ಮಾತೃವಂದನಾ ಸಮಿತಿ ಗೌರವ ಸಲಹೆಗಾರ ಎ.ಪಿ. ಭಟ್ಟ ಮುತ್ತಿಗೆ, ಮಕ್ಕಳ ತಜ್ಞ ವೈದ್ಯ ಡಾ. ಶ್ರೇಯಸ್ ವೈದ್ಯ, ಸೇವಾ ಸಂಕಲ್ಪ ಟ್ರಸ್ಟ್ ಅಧ್ಯಕ್ಷ ಪಿ.ಬಿ. ಹೊಸೂರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್, ಇತರರಿದ್ದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಕಮಲಾಕರ ಹೆಗಡೆ ಹುಕ್ಲಮಕ್ಕಿ, ಖ್ಯಾತ ಸ್ತ್ರೀರೋಗ ತಜ್ಞ ಡಾ.ಕೆ. ಶ್ರೀಧರ ವೈದ್ಯ, ಖ್ಯಾತ ಅರಿವಳಿಕೆ ತಜ್ಞ ವೈದ್ಯೆ ಡಾ.ಸುಮಂಗಲಾ ವೈದ್ಯ, ರಾಜ್ಯ ಉತ್ತಮ ಕಂದಾಯ ಅಧಿಕಾರಿ ಪ್ರಶಸ್ತಿ ಪುರಸ್ಕೃತ ತಹಸೀಲ್ದಾರ್ ಮಧುಸೂಧನ ಆರ್. ಕುಲಕರ್ಣಿ ಅವರಿಗೆ ಶ್ರೀ ಮಾತಾ ಅನುಗ್ರಹ ಗೌರವ ಸಂಮಾನ ಪ್ರದಾನ ಮಾಡಲಾಯಿತು.

ಮಕ್ಕಳ ತಜ್ಞ ವೈದ್ಯ ಡಾ.ಶ್ರೇಯಸ್ ವೈದ್ಯ, ಶ್ರೀ ಸೇವಾ ಸಂಕಲ್ಪ ಟ್ರಸ್ಟಿನ ಅಧ್ಯಕ್ಷ ಪಿ.ಬಿ. ಹೊಸೂರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್ ಇತರರಿದ್ದರು. ಪ್ರಶಾಂತ ಹೆಗಡೆ, ನಾಗರಾಜ ಭಟ್ಟ ಕೆಕ್ಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡ ಹಾಗೂ ಜಯಪ್ರಕಾಶ ಭಟ್ಟ ಮುತ್ತಿಗೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net