ಭುವನೇಶ್ವರಿ ದೇವಿ ವೃತ್ತ ನಿರ್ಮಿಸಿ

ಹೊಸಪೇಟೆ ಪೌರಾಯುಕ್ತಗೆ ಕನ್ನಡಪರ ಸಂಘಟನೆಗಳ ಮನವಿ
Published on

ಹೊಸಪೇಟೆ: ಕನ್ನಡಿಗರ ಆರಾಧ್ಯ ದೈವ ಭುವನೇಶ್ವರಿ ದೇವಿ ಪ್ರತಿಮೆಯನ್ನು ನಗರದ ಶ್ರೀ ಸಾಯಿಬಾಬಾ ವೃತ್ತದಲ್ಲಿ ನಿರ್ಮಿಸಬೇಕು ಎಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ನಗರಸಭೆ ಪೌರಾಯುಕ್ತ ಮನೋಹರ್‌ಗೆ ಸೋಮವಾರ ಮನವಿ ಸಲ್ಲಿಸಿದವು.

ಕನ್ನಡಾಂಬೆ ಭುವನೇಶ್ವರಿಯ ಮೂಲಸ್ಥಾನ ವಿಜಯಯನಗರದ ರಾಜಧಾನಿ ಹಂಪಿ. ಈ ಹಿನ್ನೆಲೆಯಲ್ಲಿ ನೂತನ ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯ ಶ್ರೀ ಸಾಯಿಬಾಬಾ ದೇವಸ್ಥಾನದ ಮುಂಭಾಗದ ವೃತ್ತವನ್ನು ತಾಯಿ ಭುವನೇಶ್ವರಿ ವೃತ್ತವೆಂದು ಘೋಷಿಸಿ.

ಪ್ರತಿಮೆ ಸ್ಥಾಪಿಸಬೇಕು ಎಂದು ಮನವಿ ಮಾಡಿದರು. ಕರವೇ ಸಮರಸೇನೆ ಉಪಾಧ್ಯಕ್ಷ ಕೆ.ಎಸ್ ಬಸವರಾಜ್, ರಾಜ್ಯ ಕಾರ್ಮಿಕ ಹಾಗೂ ಅಸಂಘಟಿತ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎ.ಹೊನ್ನೂರಸ್ವಾಮಿ, ಕರವೇ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ಶಶಿಧರ್, ಶ್ರೀ ರಾಮ ಸೇನಾ ಜಿಲ್ಲಾಧ್ಯಕ್ಷ ಜಗದೀಶ್ ಕಮಾಟಿಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net