ವರಕವಿ ದ.ರಾ. ಬೇಂದ್ರೆ ಸಂಸ್ಮರಣೆ

WhatsApp Image 2024-10-24 at 12.16.46 PM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಹಾಗೂ ಸಕ್ರಿ ಬಾಳಾಚಾರ್ಯ ಟ್ರಸ್ಟ್ ವತಿಯಿಂದ ಅ. 26ರಂದು ತಾಲೂಕಿನ ಮುಗದ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ `ಭೃಂಗದ ಬೆನ್ನೇರಿ' (ವರಕವಿ ದ.ರಾ. ಬೇಂದ್ರೆ ಸಂಸ್ಮರಣೆ) ಸಮಾರಂಭ ಆಯೋಜಿಸಲಾಗಿದೆ ಎಂದು ಸಾಹಿತಿ ಹ.ವೆಂ. ಕಾಖಂಡಿಕಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 5 ಗಂಟೆಗೆ ಸಾಹಿತಿ ಶ್ಯಾಮಸುಂದರ ಬಿದರಕುಂದಿ ಕಾರ್ಯಕ್ರಮ ಉದ್ಘಾಟಿಸುವರು. ಡಾ. ರಮಾಕಾಂತ ಜೋಶಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲಪ್ಪ ಹಟ್ಟಿಯವರ, ಎಸ್.ಎಸ್. ಪೀರಜಾದೆ ಅತಿಥಿಗಳಾಗಿ ಪಾಲ್ಗೊಳ್ಳುವರು. ಮುಗದ ಗ್ರಾ.ಪಂ. ಅಧ್ಯಕ್ಷ ರವಿ ಕಸಮಳಗಿ ಅಧ್ಯಕ್ಷತೆ ವಹಿಸುವರು ಎಂದರು.

ಸAಜೆ 5.30ಕ್ಕೆ ರಶ್ಮಿ ಶಿರಹಟ್ಟಿ, ಅರವಿಂದ ಯಾಳಗಿ, ಆನಂದ ಝಂಜರರಾಡ ಸೇರಿ 19 ಕವಿಗಳು ಬೇಂದ್ರೆ ಅವರ ಕಾವ್ಯವಾಚನ ಮಾಡುವರು. ಬಳಿಕ ನವಭಾರತ ಕಾನ್ವೆಂಟ್ ಸ್ಕೂಲ್ ಮಕ್ಕಳಿಂದ ನೃತ್ಯ ಪ್ರದರ್ಶನವಿದೆ. ಸಂಜೆ 7.30ಕ್ಕೆ ದ.ರಾ. ಬೇಂದ್ರೆ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net