

ವಿಟ್ಲ: ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ಕಳೆದ ಸಾಲಿನಲ್ಲಿ ೮೭,೭೦,೦೬,೧೨೭ ರೂ. ವ್ಯವಹಾರ ನಡೆಸಿ ೪೦,೦೫,೨೮೪ ರೂ.ನಿವ್ವಳ ಲಾಭ ಗಳಿಸಿದೆ. ಆಡಿಟ್ ವರ್ಗೀಕರಣದಲ್ಲಿ ’ಎ’ ಶ್ರೇಣಿಯನ್ನು ಸಂಘ ಪಡೆದಿದ್ದು, ಸದಸ್ಯರಿಗೆ ಶೇ.೧೦ ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ ಹೇಳಿದರು.
ಶನಿವಾರ ಪೊನ್ನೊಟ್ಟು ಬ್ರಹ್ಮ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ವಿಟ್ಲ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ಜಯಂತ್ ಪಿ. ೨೦೨೩-೨೦೨೪ರ ಸಾಲಿನ ವಾರ್ಷಿಕ ವರದಿ ಹಾಗೂ ಆರ್ಥಿಕ ವರ್ಷದ ಲೆಕ್ಕ ಪರಿಶೋಧಕರ ವರದಿ ಮಂಡಿಸಿದರು. ಸಭೆಯಲ್ಲಿ ಸಂಘದ ಸದಸ್ಯರ ಕುಟುಂಬದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ವಿದ್ಯಾರ್ಥಿವೇತನ ನೀಡಲಾಯಿತು.
ಆಡಳಿತ ಮಂಡಳಿ ನಿರ್ದೇಶಕರಾದ ಡಾ.ಗೀತಪ್ರಕಾಶ್, ರಾಘವ ಪೂಜಾರಿ, ರಮೇಶ್ ಕುಮಾರ್, ಜಗದೀಶ ವಿ., ಅಭಿಜಿತ್ ಜೆ, ರವಿ ಬಿ.ಕೆ, ಮಾಧವ ಪಿ., ಶ್ರೀಧರ್ ಬಿ., ವನಿತಾ ಚಂದ್ರಹಾಸ, ಪುಷ್ಪಾ ಎಸ್. ಉಪಸ್ಥಿತರಿದ್ದರು.
ಸರಿತಾ ರೂಪರಾಜ್ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಬಾಬು ಕೆ.ವಿ ಸ್ವಾಗತಿಸಿದರು. ನಿರ್ದೇಶಕ ಸಂಜೀವ ಪೂಜಾರಿ ಎಂ. ವಂದಿಸಿದರು. ಸಂಘದ ಪುಣಚ ಶಾಖಾ ಸಿಬ್ಬಂದಿ ಜಗನ್ನಾಥ ಪುಣಚ ಕಾರ್ಯಕ್ರಮ ನಿರೂಪಿಸಿದರು.