

ವಿಟ್ಲ: ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಪೊನ್ನೊಟ್ಟು ಶಿವಗಿರಿ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಶುಕ್ರವಾರ ಸಂಘದ ಅಧ್ಯಕ್ಷರಾದ ಸಂಜೀವ ಪೂಜಾರಿ ನಿಡ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತ್ ಪಿ. ೨೦೨೨-೨೩ ನೇ ಆರ್ಥಿಕ ವರ್ಷದ ವರದಿ ಮಂಡಿಸಿದರು. ಸಂಘವು ಪ್ರಸಕ್ತ ವರ್ಷದಲ್ಲಿ ೭೨,೩೧,೪೫,೧೭೩ ರೂ.ಗಳ ವ್ಯವಹಾರ ನಡೆಸಿದ್ದು, ೩೮,೦೭,೦೮೭ ರೂ.ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.೧೦ ಡಿವಿಡೆಂಡ್ ಘೋಷಣೆ ಮಾಡಲಾಯಿತು. ೨೦೨೩-೨೪ ನೇ ವರ್ಷದ ಅಂದಾಜು ಆಯವ್ಯಯ ಪಟ್ಟಿ ಮಂಜೂರು ಮಾಡಲಾಯಿತು.
ಕಾರ್ಯಕ್ರಮವನ್ನು ಸಂಘದ ಹಿರಿಯ ಸದಸ್ಯ ಆನಂದ ಪೂಜಾರಿ ಕುಳಾಲು ಉದ್ಘಾಟಿಸಿದರು. ಸಂಘದ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಬಾಬು ಕೆ., ನಿರ್ದೇಶಕರುಗಳಾದ ಡಾ. ಗೀತಪ್ರಕಾಶ್, ರಾಘವ ಪೂಜಾರಿ, ರಮೇಶ್ ಕುಮಾರ್.ಪಿ, ಜಗದೀಶ್. ವಿ, ಅಭಿಜಿತ್. ಜೆ, ಸಂಜೀವ ಪೂಜಾರಿ ಎಂ, ರವಿ ಬಿ.ಕೆ, ಮಾಧವ. ಪಿ, ಶ್ರೀಧರ್. ಬಿ, ವನಿತಾ ಚಂದ್ರಹಾಸ, ಪುಷ್ಪ.ಎಸ್ ಉಪಸ್ಥಿತರಿದ್ದರು.
ನಿರ್ದೇಶಕ ಶ್ರೀಧರ ಪೂಜಾರಿ ಸ್ವಾಗತಿಸಿದರು. ಉಪಾಧ್ಯಕ್ಷ ಬಾಬು ಕೆ. ವಂದಿಸಿದರು. ಸಿಬ್ಬಂದಿ ನಿಶ್ಮಿತಾ ಎಸ್.ಡಿ ಜಮಾ ಖರ್ಚಿನ ತಖ್ತೆ, ಸಚಿತ್ ಕುಮಾರ್ ಲಾಭ ನಷ್ಟ ಮತ್ತು ಶ್ರೇಯಸ್. ಕೆ ಆಸ್ತಿ ಜವಾಬ್ದಾರಿ ತಖ್ತೆ ಮಂಡಿಸಿದರು. ಸಿಬ್ಬಂದಿ ಜಗನ್ನಾಥ ಎಸ್. ಪುಣಚ ಕಾರ್ಯಕ್ರಮ ನಿರೂಪಿಸಿದರು. ಶಕೀಲ ಬಿ.ಜೆ, ಪ್ರಮೀಳ ಎ. ಸಹಕರಿಸಿದರು.