ಮೇ 31 ರಂದು ಭೋವಿ ಸಮಾಜದ ಸಭೆ

HANUMANTA
HANUMANTA
Published on

 ರಾಯಚೂರು ಭೋವಿ ವಡ್ಡರ ಜಿಲ್ಲಾ ಸಂಘದ ಸಭೆಯನ್ನು ಮೇ 31 ರಂದು ನಗರದ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ಬಳಿ ನಡೆಯಲಿದ್ದು, ಜಿಲ್ಲೆಯ ಎಲ್ಲಾ ತಾಲೂಕಗಳ ಪದಾಧಿಕಾರಿಗಳು ಭಾಗವಹಿಸುವಂತೆ ಜಿಲ್ಲಾಧ್ಯಕ್ಷ ಹನುಮಂತ ರಾಮನಗರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಭೆಯಲ್ಲಿ ಶ್ರೀ ಸಿದ್ದರಾಮೇಶ್ವರ ದೇವಸ್ಥಾನ ಖರ್ಚು ವೆಚ್ಚ ಹಾಗೂ ದೇವಸ್ಥಾನಕ್ಕೆ ದೇಣಿಗೆ ನೀಡಿರುವ ದಾನಿಗಳ ಹಣ ವಿವರ ಸಲ್ಲಿಕೆ, ದೇವಸ್ಥಾನ ಸಮಿತಿ ರಚನೆ ಹಾಗೂ ಜಿಲ್ಲಾಧ್ಯಕ್ಷ ಆಯ್ಕೆ ಕುರಿತು ಚರ್ಚಿಸಲಾಗುತ್ತದೆ.

ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಜಿಲ್ಲಾಧ್ಯಕ್ಷರ ಆಯ್ಕೆಯಾಗಿ ಮೂರು ವರ್ಷಗಳು ಪೂರ್ಣಗೊಂಡಿದ್ದು ದೇವಸ್ಥಾನ ಸಮಿತಿ ರಚನೆ, ದೇವಸ್ಥಾನ ಕಾಮಗಾರಿ ಪ್ರಾರಂಭದ ನಿರ್ಣಯದ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸುರೇಶ ಸಿರವಾರ, ಹುಲಿಗೆಪ್ಪ, ವೆಂಕಪ್ಪ, ಈರಣ್ಣ ಮಡ್ಡಿಪೇಟೆ, ಕೆ.ತಿಮ್ಮಪ್ಪ, ವೀರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net