ಚಿಂತನ-ಮಂಥನ ಸಭೆ ಜು.12ಕ್ಕೆ:ಸುಂಕಪ್ಪ ಮಾಲಗಿತ್ತಿ

Bhovi community meeting in koppal july 12 Sunkappa malagitti says
ಸುಂಕಪ್ಪ ಮಾಲಗಿತ್ತಿ
Published on

ಕೊಪ್ಪಳ: ನಗರದ ಕೇತೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀ ಸಿದ್ದರಾಮೇಶ್ವರ ಭೋವಿ (ವಡ್ಡರ) ಕ್ಷೇಮಾಭಿವೃದ್ಧಿ ಸಂಘದಿಂದ ಜುಲೈ 12 ಬೆಳಗ್ಗೆ 11 ಗಂಟೆಗೆ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಜಿಲ್ಲಾಮಟ್ಟದ ಚಿಂತನ-ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸುಂಕಪ್ಪ ಮಾಲಗಿತ್ತಿ ತಿಳಿಸಿದರು.

ಸಭೆಯಲ್ಲಿ ಜುಲೈ 20ಕ್ಕೆ ಚಿತ್ರದುರ್ಗದಲ್ಲಿ ಜರುಗುವ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ 25ನೇ ವರ್ಷದ ಪಟ್ಟಾಧಿಕಾರ ಮತ್ತು ಭೋವಿ ಜನೋತ್ಸವ ಕಾರ್ಯಕ್ರಮ ಕುರಿತು ಚರ್ಚಿಸಲಾಗುವುದು. ಜಿಲ್ಲೆಯ ಭೋವಿ ಸಮುದಾಯದ ಹಿರಿಯರು, ಮುಖಂಡರು, ಯುವಕರು, ಮಹಿಳಾ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಚಿಂತನ&ಮಂಥನ ಸಭೆಯಲ್ಲಿ ಕಲ್ಲು ಒಡೆಯುವ ಕಾರ್ಮಿಕರಿಗೆ ಜಮೀನು, ನಿವೇಶನ ಮಂಜೂರು, ಮನೆ ನಿಮಾರ್ಣ, ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮುದಾಯ ಭವನ ನಿಮಾರ್ಣ, ಹೊರಗುತ್ತಿಗೆ ನೌಕರರ ಮೀಸಲಾತಿ ಬಗ್ಗೆ ಜಾಗೃತಿ ಮತ್ತು ಪ್ರಚಾರ, ಪದವೀಧರರಿಗೆ ಉದ್ಯೋಗವಕಾಶ ಕುರಿತು ಚರ್ಚಿಸಲಾಗುವುದು. ಭೋವಿ ಅಭಿವೃದ್ಧಿ ನಿಗಮದ ಸೌಲಭ್ಯಗಳ ಅನುಷ್ಠಾನ, ಲಾನುಭವಿ ಆಯ್ಕೆ ಸೇರಿ ಅರ್ಹರಿಗೆ ಯೋಜನೆ ತಲುಪಿಸುವ ಬಗ್ಗೆ ಬೇಡಿಕೆ ಮಂಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದೆಂದರು.

ಸಂಘದ ಗೌರವಾಧ್ಯಕ್ಷ ಮಾಸ್ತೆಪ್ಪ ಕಟ್ಟಿಮನಿ, ತಾಲೂಕಾಧ್ಯಕ್ಷ ಹುಚ್ಚಪ್ಪ ಭೋವಿ, ನಿರ್ದೇಶಕ ನಾಗರಾಜ ವೀರಾಪೂರ, ಪ್ರಮುಖರಾದ ವೆಂಕಟೇಶ ಸುಂದರಂ, ಹುಲುಗಪ್ಪ ಕಟ್ಟಿಮನಿ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net