ಆದಿಚುಂಚನಗಿರಿ ಮಠದಿಂದ ವೃದ್ಧಾಶ್ರಮ ನಿರ್ಮಾಣಕ್ಕೆ ಭೂಮಿ ಪೂಜೆ

20 NMG 01 (7)
Published on

ನಾಗಮಂಗಲ : ವೃದ್ಧರಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಆದಿಚುಂಚನಗಿರಿ ಮಠದ ವತಿಯಿಂದ ಆದಿಚುಂಚನಗಿರಿಯ ಪುಷ್ಪಕಾಶಿ ಆವರಣದಲ್ಲಿ ವೃದ್ಧಾಶ್ರಮ ಕಟ್ಟಡ ಕಾಮಗಾರಿಗೆ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.


ತಾಲೂಕಿನ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂದರೆ ಆದಿಚುಂಚನಗಿರಿ ಕ್ಷೇತ್ರದ ಸಮೀಪವಿರುವ ಪುಷ್ಪಕಾಶಿ ಆವರಣದಲ್ಲಿ ವೃದ್ಧಾಶ್ರಮ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಶಿಕ್ಷಣ, ಆರೋಗ್ಯ ಹಾಗೂ ದಾಸೋಹ ನೀಡುತ್ತಿದ್ದ ಆದಿಚುಂಚನಗಿರಿ ಕ್ಷೇತ್ರದಲ್ಲಿ ವಯೋವೃದ್ಧರು ಹಾಗೂ ನಿರಾಶ್ರಿತ ವೃದ್ದರಿಗೆ ಆಶ್ರಯ ಕಲ್ಪಿಸಲು ಮುಂದಾಗಿದೆ.


ಇತ್ತೀಚೆಗೆ ಕೌಟುಂಬಿಕ ಕಲಹಗಳಿಂದ ಹಾಗೂ ಆಶ್ರಯವಿಲ್ಲದಂತಹ ನೂರಾರು ವಯೋವೃದ್ಧರು ಆದಿಚುಂಚನಗಿರಿ ಕ್ಷೇತ್ರಕ್ಕೆ ಆಶ್ರಯ ಹರಸಿ ಶ್ರೀಗಳ ಬಳಿ ಬಂದು ಕಣ್ಣೀರು ಹಾಕುತ್ತಿದ್ದರು. ಅಂತಹ ಸಂದರ್ಭಗಳಲ್ಲಿ ಮಕ್ಕಳನ್ನು ಕರೆಸಿ ಬುದ್ದಿ ಹೇಳಿ ತಂದೆ-ತಾಯಿಯನ್ನು ಮಕ್ಕಳೊಂದಿಗೆ ಕಳುಹಿಸಿರುವಂತಹ ಹಲವು ನಿದರ್ಶನಗಳಿದ್ದವು.

ಆದರೆ ಮಕ್ಕಳು ಇಲ್ಲದೆ, ಆರೈಕೆ ಮಾಡುವವರು ಇಲ್ಲದಿರುವ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಸೂಕ್ತ ವ್ಯವಸ್ಥೆ ಇಲ್ಲವಾಗಿತ್ತು. ಈ ಎಲ್ಲವನ್ನು ಮನಗೊಂಡು ರ್ಶರೀಗಳು ಕ್ಷೇತ್ರದ ತಪ್ಪಲಿನಲ್ಲಿರುವ ಪುಷ್ಪಕಾಶಿಯಲ್ಲಿ ಸುಮಾರು ನೂರು ಜನ ಸಾಮರ್ಥ್ಯದ ವೃದ್ಧಾಶ್ರಮ ನಿರ್ಮಾಣ ಮಾಡುತ್ತಿದ್ದಾರೆ.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಮಠದ ಖಜಾಂಚಿ ಚೈತನ್ಯನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ಮುಖಂಡ ಎಚ್.ಟಿ.ಕೃಷ್ಣೇಗೌಡ ಸೇರಿದಂತೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net