ರೈತರಿಗಾಗಿ ಭೂಮಿ ಪುತ್ರ ಫೌಂಡೇಷನ್ ಅಸ್ಥಿತ್ವಕ್ಕೆ: ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್ಯ ಲೋಕೇಶ್ ಮಾಹಿತಿ

Bhoomi Putra Foundation press conference Mandya
Published on

ಮಂಡ್ಯ: ದೇಶದ ಅಭಿವೃದ್ಧಿಗೆ ದುಡಿಯುತ್ತಿರುವ ರೈತರು ವ್ಯವಸಾಯ ಬಿಟ್ಟು ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರನ್ನು ಅಭಿವೃದ್ಧಿಪಡಿಸುವ ದೃಷ್ಠಿಯಿಂದ ಭೂಮಿ ಪುತ್ರ ಫೌಂಡೇಷನ್ ಅಸ್ಥಿತ್ವಕ್ಕೆ ತರಲಾಗುತ್ತಿದೆ ಎಂದು ಫೌಂಡೇಷನ್‌ನ ಸಂಸ್ಥಾಪಕ ರಾಜ್ಯಾಧ್ಯಕ್ಷ ಆರ್ಯ ಲೋಕೇಶ್ ತಿಳಿಸಿದರು.

ರೈತರಿಗೆ ವ್ಯವಸಾಯದ ಬಗ್ಗೆ, ವ್ಯವಸಾಯವನ್ನು ಲಾಭದಾಯಕವಾಗಿ ರೂಪಿಸಿಕೊಳ್ಳುವ ಸಲುವಾಗಿ ಹಾಗೂ ರೈತರಿಗೆ ದೊರೆಯುವ ಸರ್ಕಾರಿ ಯೋಜನೆಗಳನ್ನು ದೊರೆಕಿಸುವುದು ನಮ್ಮ ಉದ್ದೇಶವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಮ್ಮ ಸಂಘಟನೆ ರಾಜ್ಯಾದ್ಯಂತ ಎಲ್ಲ ಜಿಲ್ಲೆ, ತಾಲೂಕು, ಹಳ್ಳಿಯಲ್ಲಿ ಆಸಕ್ತ ಸದಸ್ಯರನ್ನು ಹೊಂದಿದೆ. ಪ್ರತಿ ರೈತನ ಮನೆಗೆ ಸರ್ಕಾರಿ ಸವಲತ್ತು, ಯೋಜನೆ ತಲುಪಿಸಲು ಹಾಗೂ ಅಧಿಕಾರಿಗಳು ಮತ್ತು ರೈತರ ನಡುವಿನ ಉತ್ತಮ ಸಂಬಂಧ ಬೆಳೆಸುವ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಜತೆಗೆ ರೈತರಿಗಾಗಿ ರಾಜ್ಯದಲ್ಲಿ ರೈತ ರಕ್ಷಣಾ ಅಭಿಯಾನ, ರಾಸಾಯನಿಕ ಮುಕ್ತ ಅಭಿಯಾನ, ಅಧಿಕ ಇಳುವರಿ ಪೋಷಕಾಂಶ ಕೊರತೆ ಚರ್ಚೆ, ರೈತ ಜಾಗೃತಿ ಅಭಿಯಾನ ಮರಳಿ ಗೂಡಿಗೆ ಅಭಿಯಾನ, ಅನ್ನದ ಋಣ ಅಭಿಯಾನ, ನಿರಾಳ ಕಾರ್ಯಕ್ರಮ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಪ್ರಧಾನ ಕಾರ್ಯದರ್ಶಿ ಪ್ರಣವ್, ಶಂಕರಲಿಂಗೇಗೌಡ, ಸಚಿನ್, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net