ಕೊಳಗಿಬೀಸ್ ಮುಖ್ಯದ್ವಾರಕ್ಕೆ ಭೂಮಿಪೂಜೆ

Dwarabagilu
Published on

ಶಿರಸಿ: ತಾಲೂಕಿನ ಶ್ರೀಕ್ಷೇತ್ರ ಕೊಳಗಿಬೀಸ್ ಮಾರುತಿ ದೇವಾಲಯಕ್ಕೆ ನಿರ್ಮಿಸಲು ಉದ್ದೇಶಿತ ಮುಖ್ಯದ್ವಾರಕ್ಕೆ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹಾಗೂ ಪತ್ನಿ ಹೇಮಾ ಹೆಬ್ಬಾರ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.

ಕಳೆದ 2 ವರ್ಷದ ಹಿಂದೆ ಶ್ರೀನಿವಾಸ ಹೆಬ್ಬಾರ ಅವರು ದೇವಾಲಯಕ್ಕೆ ಮಹಾದ್ವಾರ ನಿರ್ಮಿಸಿದ್ದರು. ಅದೇ ವೇಳೆ ಮುಖ್ಯದ್ವಾರ ನಿರ್ಮಿಸಿಕೊಡುವ ಸಂಕಲ್ಪ ಮಾಡಿದ್ದ ಹೇಮಾ ಹೆಬ್ಬಾರ ಅವರು ವಿವಿಧ ಧಾರ್ಮಿಕ ವಿಧಿ-ವಿಧಾನದೊಂದಿಗೆ ಭೂಮಿ ಪೂಜೆ ನೆರವೇರಿಸಿದರು.

ಮುಖ್ಯದ್ವಾರವು 30 ಅಡಿ ಅಗಲ ಹಾಗೂ 20 ಅಡಿ ಎತ್ತರ, ಮೇಲ್ಭಾಗದಲ್ಲಿ ಬೃಹದಾಕಾರದ ಮಾರುತಿ ಮೂರ್ತಿ ನಿರ್ಮಿಸಲಾಗುವುದು. ತಾಲೂಕಿನ ಇನ್ನಿತರ ದೇವಸ್ಥಾನಗಳಲ್ಲಿರುವ ದ್ವಾರಕ್ಕಿಂತ ಇದು ವಿಭಿನ್ನವಾಗಿರಲಿದೆ ಎಂದು ಹೇಮಾ ಹೆಬ್ಬಾರ ಹೇಳಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ ಭಟ್ಟ ಇಳ್ಳುಮನೆ, ಸದಸ್ಯರಾದ ಶ್ರೀಧರ ಭಟ್ಟ, ಉಮಾಪತಿ ಭಟ್ಟ, ರಮೇಶ ಭಟ್ಟ, ಗಣಪತಿ ಭಟ್ ಹೆಬ್ಬಲಸು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net