ಗ್ರಂಥಾಲಯ ಕಟ್ಟಡಕ್ಕೆ ಭೂಮಿ ಪೂಜೆ

16ant3ep (1)
ಆನವಟ್ಟಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗ್ರಂಥಾಲಯ ಹಾಗೂ ಕೊಠಡಿಗಳ ನಿರ್ಮಾಣಕ್ಕೆ ಸಚಿವ ಮಧು ಬಂಗಾರಪ್ಪ ಗುದ್ದಲಿ ಪೂಜೆ ನೆರವೇರಿಸಿದರು. ಗಣಪತಿ, ಮಧುಕೇಶ್ವರ ಪಾಟೀಲ್, ಚಾಂದ್ ನೂರಿ, ಬಸವರಾಜಪ್ಪ, ರಾಜು ಇತರರಿದ್ದರು.
Published on

ಆನವಟ್ಟಿ: ಇಲ್ಲಿನ ಪ್ರಥಮದರ್ಜೆ ಕಾಲೇಜಿನ ಗ್ರಂಥಾಲಯ ಹಾಗೂ ಹೆಚ್ಚುವರಿ ಕೊಠಡಿಗಳಿಗೆ ಎಸ್‌ಡಿಪಿ ಯೋಜನೆಯಡಿ 2.25 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಶನಿವಾರ ಹುರುಳಿ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, 20 ಲಕ್ಷ ರೂ. ವೆಚ್ಚದ ಎಸ್‌ಸಿ ಕಾಲನಿಯ ಸಮುದಾಯ ಭವನ, ವಿಠಲಾಪುರ ಗ್ರಾಮದ 50 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಕಾಂಪೌಂಡ್, ವಾಹನ ನಿಲುಗಡೆ ಶೆಡ್ ಮುಂತಾದ ಯೋಜನೆಗಳಿಗೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಪ್ರಾಚಾರ್ಯ ಎಂ.ಬಿ.ಗಣಪತಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಧುಕೇಶ್ವರ ಪಾಟೀಲ್, ಸದಸ್ಯರಾದ ಚಾಂದ್ ನೂರಿ, ಎಚ್.ಎಚ್ ಬಸವರಾಜಪ್ಪ, ಚನ್ನಾನಾಯ್ಕ, ರಾಜು, ಬಿ.ಸುಮಾ, ಶಾಂತಾರಾಮ್, ಮುಖಂಡರಾದ ಸದಾನಂದ ಗೌಡ ಬಿ. ಪಾಟೀಲ್, ಕೆ.ಪಿ.ರುದ್ರಗೌಡ, ಆರ್.ಸಿ ಪಾಟೀಲ್, ಸುರೇಶ್ ಹಾವಣ್ಣನವರ್, ಎಲ್.ಜಿ ಮಾಲತೇಶ್, ಅರುಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net