

ಕಮತಗಿ: ಸಮೀಪದ ಐಹೊಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜಾ ಕಾರ್ಯಕ್ರಮ ಜರುಗಿತು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ, ಶಾಸಕ ಎಚ್.ವೈ.ಮೇಟಿ ಮಾತನಾಡಿ, ರೈತರ ಅನುಕೂಲಕ್ಕಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಆರಂಭಿಸಲಾಗಿದೆ. ಕಡಿಮೆ ಅವಯಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿರುವುದು ಉತ್ತಮವಾದ ಬೆಳವಣಿಗೆ. ಸಹಕಾರ ತತ್ವದಲ್ಲಿ ನಂಬಿಕೆ ಇಟ್ಟು ಮುನ್ನಡೆಯಬೇಕು. ಪರಸ್ಪರ ಸಹಕಾರ ಮನೋಭಾವದಿಂದ ನಡೆದಾದ ಉತ್ತಮವಾದ ಬೆಳವಣಿಕೆ ಹೊಂದಲು ಸಾಧ್ಯವಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ ಮಾತನಾಡಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪಿಕೆಪಿಎಸ್ ಕಟ್ಟಡ ನಿರ್ಮಾಣಕ್ಕೆ ಸಹಾಯಧನವನ್ನು ನೀಡುತ್ತಿದೆ. ಈಗಾಗಲೇ ಜಿಲ್ಲೆಯ ಅನೇಕ ಪಿಕೆಪಿಎಸ್, ಸಹಕಾರ ಸಂಘಗಗಳಿಗೆ ಸಹಾಯಧನ ನೀಡಲಾಗಿದೆ. ಪರಸ್ಪರ ಸಹಕಾರ ಒಂದು ಉತ್ತಮವಾದ ಆರ್ಥಿಕ ಸಂಘದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ತಿಳಿಸಿದರು.
ಪಿಕೆಪಿಎಸ್ ಅಧ್ಯಕ್ಷ ಸಿದ್ದು ಹೂಗಾರ, ಉಪಾಧ್ಯಕ್ಷ ಬಸಪ್ಪ ಕುರಿ, ನಿರ್ದೇಶಕರಾದ ಸಿದ್ದು ನಿಂಬಲಗುಂದಿ, ಶರಣಪ್ಪ ಮಾಯಾಚಾರಿ, ಶೇಖಪ್ಪ ಕಾಖಂಡಕಿ, ಈರಪ್ಪ ಯರಗಟ್ಟಿ, ಭೀಮಪ್ಪ ತಳವಾರ, ಹನಮವ್ವ ಕೊಂತ, ಗ್ಯಾನವ್ವ ಮಡಿಕಾರ, ಮುಖಂಡರಾದ ಬಿ.ಸಿ.ಅಂಟರತಾನಿ, ಸಂಗಣ್ಣ ಹಂಡಿ, ಪಿ.ಎ್. ಗೋಡಿ, ಯಂಕಪ್ಪ ಕುರಿ, ಶರಣಪ್ಪ ಭಜಂತ್ರಿ ಇದ್ದರು.