ಭೂಮನಗುಂಡ ಆಂಜಿನಯ್ಯ ಜಾತ್ರೆ ಸಂಪನ್ನ

k
ಅರಕೇರಾ ಸಮೀಪದ ಭೂಮನಗುಂಡ ಶ್ರೀ ಆಂಜಿನಯ್ಯ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಏರ್ಪಡಿಸಿದ್ದ ಹಾಲಗಂಬ ಉತ್ಸವದಲ್ಲಿ ಸ್ಪರ್ಧಿಗಳು ಹಾಲಗಂಬ ಹತ್ತುತ್ತಿರುವುದು.
Published on

ಅರಕೇರಾ: ಸಮೀಪದ ಭೂಮನಗುಂಡ ಶ್ರೀ ಆಂಜಿನಯ್ಯ ಜಾತ್ರಾ ಮಹೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ 9 ಗಂಟೆಗೆ ಗಂಗಾಸ್ಥಳಕ್ಕೆ ತೆರಳಿ ಉದಕ ತರಲಾಯಿತು. ರಥದ ಗಾಲಿಗಳಿಗೆ ಭಕ್ತರು ಮೂರು ಸಾವಿರ ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು. ಮಹಿಳೆಯರು ಕಳಸ ಹಿಡಿದು ಉತ್ಸವಕ್ಕೆ ಮೆರಗು ತಂದರು.


ಹಾಲಗಂಬ ಉತ್ಸವ

ಶನಿವಾರ ಏರ್ಪಡಿಸಿದ್ದ ಹಾಲಗಂಬ ಉತ್ಸವದಲ್ಲಿ 60 ಅಡಿ ಎತ್ತರದ ಹಾಲುಗಂಬಕ್ಕೆ ಜಾಜು ಲೇಪನ ಹಾಗೂ ಲೋಳೆ ರಸ ಹಚ್ಚಲಾಗಿತ್ತು. ಕಂಬದ ಮೇಲೆ ಕುಳಿತ ಪೂಜಾರಿ ಸ್ಪರ್ಧಿಗಳಿಗೆ ಮೇಲಿನಿಂದ ನೀರು, ಮಜ್ಜಿಗೆ, ತುಪ್ಪ ಬಿಟ್ಟರು. ಸ್ಪರ್ಧಿಗಳು ಕಂಬ ಏರುವ ಪೈಪೋಟಿ ಜನರಿಗೆ ಮನರಂಜನೆ ನೀಡಿತು. ಒಬ್ಬರ ಮೇಲೊಬ್ಬರು ಹತ್ತುವಾಗ ಕೆಲವರು ಜಾರಿ ಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಾಲಯ್ಯ ಕೊಂಡ್ಲ ಪ್ರಥಮರಾಗಿ ಕಂಬ ಏರಿ ಜಯ ಸಾಧಿಸಿದರು. ಮೂರ‌್ನಾಲ್ಕು ದಿನ ಜರುಗುವ ಜಾತ್ರೆಗೆ ದೇವಸ್ಥಾನ ವಿವಿಧ ಬಗೆಯ ಹೂವು, ಬಣ್ಣದ ವಿದ್ಯುತ್ ದ್ವೀಪಗಳಿಂದ ಕಂಗೊಳಿಸುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net